ಭಾರತದ ಸಿನಿ ರಂಗದ ದುಬಾರಿ ನಟ ಪ್ರಭಾಸ್ ಸಂಭಾವಣೆ ಎಷ್ಟು..?
ಒಂದಲ್ಲ.. ನೂರಲ್ಲ… ಬರೋಬ್ಬರಿ 500 ಕೋಟಿ.. ಹೌದು, ಪ್ರಭಾಸ್ ಚಿತ್ರದಲ್ಲಿ ನಟಿಸಬೇಕು ಅಂತಾದ್ರೆ ನಿರ್ಮಾಪಕರು ಕೈಯಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿಯನ್ನಿಟ್ಟುಕೊಳ್ಳಬೇಕು. ಹಾಗಂತ ಹಾಕಿದ್ದ ಬಂಡವಾಳಕ್ಕೆ ಪ್ರಭಾಸ್ ಮೋಸ ಮಾಡಲ್ಲ. ಚಿತ್ರ ಬಿಡುಗಡೆಯ ಮುನ್ನವೇ ಹಾಕಿರೋ ಬಂಡವಾಳ ವಾಪಸ್ ಬರುತ್ತದೆ ಎಂಬ ಗ್ಯಾರಂಟಿ ಇದೆ. ಚಿತ್ರ ಫ್ಲಾಫ್ ಆಗಲಿ, ಸೂಪರ್ ಹಿಟ್ ಆಗಲಿ ಪ್ರಭಾಸ್ ಮೇಲೆ ನಿರ್ಮಾಪಕರು ಧೈರ್ಯದಿಂದಲೇ ಬಂಡವಾಳ ಹಾಕಬಹುದು. ಇದಕ್ಕೆ ಉದಾಹರಣೆ ಸಾಹೋ ಚಿತ್ರ. ಸಾಹೋ ಸಿನಿಮಾ ಹಿಟ್ ಆಗದಿದ್ರೂ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲೂ ಲಾಸ್ ಆಗಿಲ್ಲ.
ಯಾಕಂದ್ರೆ ಪ್ರಭಾಸ್ ಕೇವಲ ತೆಲುಗ ಸಿನಿ ರಂಗಕ್ಕೆ ಸೀಮಿತವಾಗಿಲ್ಲ. ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್ ಆಗಿರುವ ಪ್ರಭಾಸ್ ಭಾರೀ ಬೇಡಿಕೆ ಮತ್ತು ದುಬಾರಿ ಸ್ಟಾರ್ ಆಗಿದ್ದಾರೆ. ದೊಡ್ಡ ಬಜೆಟ್ ನ ಚಿತ್ರಗಳ ಡಾರ್ಲಿಂಗ್ ಆಗಿರುವ ಪ್ರಭಾಸ್ ತನ್ನ ಸಂಭಾವಣೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್, ಅಮೀರ್ ಖಾನ್ ಅವರು ಒಂದು ಚಿತ್ರಕ್ಕೆ ನೂರು ಕೋಟಿ ರೂಪಾಯಿ ಸಂಭಾವಣೆ ಪಡೆಯುತ್ತಿದ್ದಾರೆ. ಪ್ರಭಾಸ್ ಕೂಡ ಅಷ್ಟೇ ಸಂಭಾವಣೆಯನ್ನು ಪಡೆಯುತ್ತಿದ್ದಾರೆ.
ಇದೀಗ ಪ್ರಭಾಸ್ ಅವರು ಸ್ಪಿರೀಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಪಡೆಯುತ್ತಿರುವ ಸಂಭಾವಣೆ ಬರೋಬ್ಬರಿ 150 ಕೋಟಿ ರೂಪಾಯಿ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಸಂಭಾವಣೆ ಪಡೆಯುವ ನಟ ಎಂಬ ಖ್ಯಾತಿಗೆ ಪ್ರಭಾಸ್ ಪಾತ್ರರಾಗಿದ್ದಾರೆ. ಅಂದ ಹಾಗೇ ಪ್ರಭಾಸ್ ನಟಿಸುತ್ತಿರುವ ನಟಿಸುತ್ತಿರುವ ಸ್ಪಿರೀಟ್ ಚಿತ್ರವನ್ನು ಟಿ ಸಿರೀಸ್ ಭದ್ರ ಕಾಳಿ ಮೂವಿಸ್ ನವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ಅವರು ನಿದೇರ್ಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ಖಡಕ್ ಪೋಲಿಸ್ ಪಾತ್ರ ದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಪ್ರಭಾಸ್ ನಟಿಸಿರುವ ಮೂರು ಚಿತ್ರಗಳು ತೆರೆ ಮೇಲೆ ಬರಲು ಸಿದ್ಧವಾಗಿವೆ. ರಾಧೆ ಶ್ಯಾಮ್ ಜನವರಿ 14ರಂದು ಬಿಡುಗಡೆಯಾಗಲಿದೆ. ಇನ್ನುಳಿದಂತೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಹಾಗೂ ದೊಡ್ಡ ಬಜೆಟ್ ನ ಆದಿ ಪುರುಷ್ ಚಿತ್ರಗಳು ಕೂಡ ತೆರೆ ಕಾಣಲು ಸಿದ್ಧವಾಗುತ್ತಿವೆ.