ಹೊಸದಿಲ್ಲಿ, ಜೂನ್ 3 : ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಹೆಚ್ಚಾಗಿ ಬ್ಯಾಂಕ್ ಖಾತೆಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತೆರೆಯಲಾಗುತ್ತದೆ. ಆದರೆ ನೀವು ಬಯಸಿದಲ್ಲಿ ಖಾಸಗಿ ಬ್ಯಾಂಕಿನಲ್ಲಿಯೂ ಪ್ರಧಾನ್ ಮಂತ್ರಿ ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದೆ. ಅಷ್ಟೇ ಅಲ್ಲ ಈ ಮೊದಲು ಬೇರೆ ಯಾವುದೇ ಉಳಿತಾಯ ಖಾತೆಯನ್ನು ಹೊಂದಿದ್ದರೂ ಕೂಡ ಅದನ್ನು ಜನ್ ಧನ್ ಖಾತೆಗೆ ಪರಿವರ್ತಿಸಬಹುದಾಗಿದೆ.
ಸರ್ಕಾರವು ಜನ್ ಮನ್ ಖಾತೆಯನ್ನು ತೆರೆಯುವುದು ಅಥವಾ ಚಾಲ್ತಿಯಲ್ಲಿರುವ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಗೆ ಪರಿವರ್ತಿಸುವುದು ಮತ್ತು ಸರ್ಕಾರಿ ಬ್ಯಾಂಕಿನ ಜೊತೆಗೆ ಖಾಸಗಿ ಬ್ಯಾಂಕಿನಲ್ಲಿ ಜನ ಧನ್ ಖಾತೆಯನ್ನು ತೆರೆಯುವುದು ಬಹಳ ಸುಲಭವಾದ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದೆ.
ಕೆಳಕಂಡ ಖಾಸಗಿ ಬ್ಯಾಂಕ್ ಗಳಲ್ಲಿ ಜನ್ ಧನ್ ಖಾತೆ ತೆರೆಯಬಹುದಾಗಿದೆ.
ಧನಲಕ್ಷ್ಮಿ ಬ್ಯಾಂಕ್
ಯೆಸ್ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್
ಐಸಿಐಸಿಐ ಬ್ಯಾಂಕ್
ಆಕ್ಸಿಸ್ ಬ್ಯಾಂಕ್
ಫೆಡರಲ್ ಬ್ಯಾಂಕ್
ಐಎನ್‌ಜಿ ವೈಶ್ಯ
ಕೋಟಕ್ ಮಹೀಂದ್ರಾ
ಕರ್ನಾಟಕ ಬ್ಯಾಂಕ್
ಇಂಡಸ್‌ಇಂಡ್ ಬ್ಯಾಂಕ್
ಭಾರತದಲ್ಲಿ ವಾಸವಾಗಿರುವ 10 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದೆ.
ಸಲ್ಲಿಸಬೇಕಾದ ದಾಖಲೆಗಳು:
ಜನ್ ಧನ್ ಖಾತೆ ತೆರೆಯಲು ಕೆವೈಸಿ ಅಡಿಯಲ್ಲಿ ದಾಖಲೆಗಳ ಪರಿಶೀಲನೆ ಅಗತ್ಯವಾಗಿದ್ದು, ಈ ದಾಖಲೆಗಳನ್ನು ಬಳಸಿಕೊಂಡು ಜನ ಧನ್ ಖಾತೆಯನ್ನು ತೆರೆಯಬಹುದು.
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್ಚಾ
ಚಲನಾ ಪರವಾನಿಗೆ
ಮತದಾರರ ಗುರುತಿನ ಚೀಟಿ
ಪಾಸ್ ಪೋರ್ಟ್
ನರೇಗಾ ಜಾಬ್ ಕಾರ್ಡ್
ಯಾವುದೇ ಹಳೆಯ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಖಾತೆಗೆ ಪರಿವರ್ತಿಸಬಹುದಾಗಿದೆ. ಇದಕ್ಕಾಗಿ ನೀವು,
ಹಂತ 1: ಮೊದಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ.
ಹಂತ 2: ಅಲ್ಲಿ ನಿಮ್ಮ ಖಾತೆಗೆ ಬದಲಾಗಿ ರುಪೇ ಕಾರ್ಡ್‌ಗೆ ಅರ್ಜಿ ಸಲ್ಲಿಸಿ.
ಹಂತ 3: ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಅದನ್ನು ಬ್ಯಾಂಕಿಗೆ ಸಲ್ಲಿಸಿ.
ಹಂತ 4: ಇದರ ಬಳಿಕ ನಿಮ್ಮ ಖಾತೆಯನ್ನು ಜನ ಧನ್ ಖಾತೆಗೆ ಪರಿವರ್ತಿಸಲಾಗುತ್ತದೆ.
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯ ಲಾಭಗಳು
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯಲ್ಲಿ ಖಾತೆ ತೆರೆಯುವುದರಿಂದ ಅನೇಕ ಸೌಲಭ್ಯಗಳು ಲಭ್ಯವಿದೆ.
1. ಜನ ಧನ್ ಖಾತೆಯಲ್ಲಿ ಜಮಾ ಮಾಡಿದ ಮೊತ್ತಕ್ಕೆ ಬಡ್ಡಿ ನೀಡಲಾಗುತ್ತದೆ.
2. ಖಾತೆದಾರರಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವಿದೆ.
3. ಜನ್ ಧನ್ ಖಾತೆದಾರ ಖಾತೆಯಲ್ಲಿ ಹಣವಿಲ್ಲದಿದ್ದರೂ, 10 ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದ ಕೆಲವು ತಿಂಗಳ ಬಳಿಕ ಈ ಸೌಲಭ್ಯ ಅನ್ವಯಿಸುತ್ತದೆ.
4. ಈ ಖಾತೆಯೊಂದಿಗೆ ಎರಡು ಲಕ್ಷ ರೂಪಾಯಿಗಳ ಅಪಘಾತ ವಿಮೆ ಸೌಲಭ್ಯವಿದೆ.
5. 30 ಸಾವಿರ ರೂಪಾಯಿಗಳ ವಿಮೆಯೂ ಇದ್ದು, ಖಾತೆದಾರನ ಮರಣದ ನಂತರ ನಾಮ ನಿರ್ದೇಶಿತ ವ್ಯಕ್ತಿಯು ಅದನ್ನು ಪಡೆಯುತ್ತಾನೆ.
6. ಖಾತೆದಾರರು ಈ ಖಾತೆಯ ಮೂಲಕ ವಿಮೆ ಮತ್ತು ಪಿಂಚಣಿ ಯೋಜನೆಯನ್ನು ಸುಲಭವಾಗಿ ಪಡೆಯಬಹುದಾಗಿದೆ.
7. ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ನೀವು ಚೆಕ್ ಬುಕ್ ಸೌಲಭ್ಯವನ್ನು ತೆಗೆದುಕೊಳ್ಳುತ್ತಿದ್ದರೆ ಮಾತ್ರ ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು.








