Prahlad Joshi | ಈಗಿರುವ ಕಾಂಗ್ರೆಸ್ ನವರು ಒರಿಜಿನಲ್ ಕಾಂಗ್ರೆಸ್ ನವರಲ್ಲ
ಹಾವೇರಿ : ಕಾಂಗ್ರೆಸ್ ನವರು ಇದರಲ್ಲಿ ರಾಜಕೀಯ ಮಾಡಬಾರದಿತ್ತು. ಕಾಂಗ್ರೆಸ್ ಮತ್ತು ಅನೇಕ ಸಂಘಟನೆಗಳು, ಕ್ರಾಂತಿಕಾರಿಗಳ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಈಗಿರುವ ಕಾಂಗ್ರೆಸ್ ನವರು ಒರಿಜಿನಲ್ ಕಾಂಗ್ರೆಸ್ ನವರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಶಿಗ್ಗಾವಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನವರು ಇದರಲ್ಲಿ ರಾಜಕೀಯ ಮಾಡಬಾರದಿತ್ತು. ಕಾಂಗ್ರೆಸ್ ಮತ್ತು ಅನೇಕ ಸಂಘಟನೆಗಳು, ಕ್ರಾಂತಿಕಾರಿಗಳ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಈಗಿರುವ ಕಾಂಗ್ರೆಸ್ ನವರು ಒರಿಜಿನಲ್ ಕಾಂಗ್ರೆಸ್ ನವರಲ್ಲ.

ಈ ಕಾಂಗ್ರೆಸ್ ಗೂ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಇದ್ದ ಆಗಿನ ಕಾಂಗ್ರೆಸ್ ಗೂ ಸಂಬಂಧವೇ ಇಲ್ಲ. ಇದು ಡುಬ್ಲಿಕೇಟ್ ಕಾಂಗ್ರೆಸ್ ಮತ್ತು ಈಗಿರುವವರು ಡುಬ್ಲಿಕೇಟ್ ಗಾಂಧಿಗಳು. ಅಂದಿನ ಹೋರಾಟವನ್ನು ನಮ್ಮ ಹೋರಾಟ ಎಂದು ಕ್ಲೇಮ್ ಮಾಡಿಕೊಳ್ಳಲು ಇವರಿಗೆ ಯಾವುದೇ ಅರ್ಹತೆ ಇಲ್ಲ. ಕಾಂಗ್ರೆಸ್ ನವರಿಗೆ ಯಾವುದೇ ನೈತಿಕ ಅಧಿಕಾರ ಇಲ್ಲ ಎಂದು ಹೇಳಿದರು.
ಇನ್ನು ಈಗಿರುವುದು ‘ಐ’ ಕಾಂಗ್ರೆಸ್ ಅಂದರೆ ಇಂದಿರಾ ಕಾಂಗ್ರೆಸ್, ಇದರಲ್ಲಿ ಭ್ರಷ್ಟರು, ದೇಶಕ್ಕೆ ಸುಳ್ಳು ಹೇಳಿರುವರು ಬಂದಿದ್ದಾರೆ. ಇದೊಂದು ನಕಲಿ ಕಾಂಗ್ರೆಸ್ ಮತ್ತು ನಕಲಿ ಗಾಂಧಿಗಳ ಪಾರ್ಟಿ. ಬಿಜೆಪಿ ಅಧೀಕೃತವಾಗಿ 1980 ರಲ್ಲಿ ಬಂತು. ಹಿಂದಿನ ಲೆಕ್ಕ ತೆಗೆದರೆ ನಮ್ಮ ಜನ ಸಂಘ ಬಂದಿದ್ದು 1952 ರಲ್ಲಿ, ಇದಕ್ಕಿಂತ ಮೊದಲು ನಮ್ಮ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಇವರೆಲ್ಲಿ ಭಾಗವಹಿಸಿದ್ರು ಎಂದು ಪ್ರಶ್ನಿಸಿದ್ದಾರೆ.