ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್..!
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಬಗ್ಗೆ ಪ್ರಜ್ವಲ್ ದೇವರಾಜ್ ಸಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
‘ನನಗೆ ಮತ್ತು ರಾಗಿಣಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇಬ್ಬರೂ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇವೆ. ನಿಮ್ಮವರಿಗೆ ಆತಂಕ ಉಂಟು ಮಾಡಬೇಡಿ. ಸುರಕ್ಷಿತವಾಗಿರಿ, ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಪ್ರಜ್ವಲ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಸಿನಿಮಾ ಬಗ್ಗೆ ಮಾತನಾಡುವುದಾದ್ರೆ ಫೆ. 5 ರಂದು ರಿಲೀಸ್ ಆಗಿದ್ದ ಪ್ರಜ್ವಲ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡು ಸಕ್ಸಸ್ ಆಗಿದೆ. 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇನ್ನೂ ಪ್ರಜ್ವಲ್ ನಟಿಸಿರುವ ಮತ್ತೊಂದು ಸಿನಿಮಾ ‘ಅರ್ಜುನ್ ಗೌಡ’ ಬಿಡುಗಡೆಗೆ ಸಜ್ಜಾಗಿದ್ದು, ಮುಂದಿನ ವಾರ ರಿಲೀಸ್ ಆಗಲಿದೆ.
ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!
‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!