ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!
ಬಾಲಿವುಡ್ ನಟಿ ಆಲಿಯಾ ಭಟ್ ಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಈ ಬಗ್ಗೆ ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.
ಇನ್ಸ್ಟಾ ಗ್ರಾಂನಲ್ಲಿ ತಿಳಿಸಿರುವ ನಟಿ ನನಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಾನು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಆಲಿಯಾ ಸದ್ಯ ಮುಂಬೈನಲ್ಲಿ ಸಂಜಯ್ ಲೀಲಾ ಭನ್ಸಾಲಿ ಅವರ ‘ಗಂಗುಬಾಯಿ ಕಥಿಯಾವಾಡಿ’ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಇದರ ಹೊರತಾಗಿ ಆಲಿಯಾ ರಾಜಮೌಳಿ ನಿರ್ದೇಶನದ ರಾಮ್ ಚರಣ್, ಜ್ಯೂ, NTR ಅಭಿನಯದ RRR ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!
PAN ಗೆ ಆಧಾರ್ ಲಿಂಕ್ ಮಾಡಿಲ್ಲದವರಿಗೆ ರಿಲೀಫ್ – 9ನೇ ಬಾರಿಗೆ ದಿನಾಂಕ ವಿಸ್ತರಣೆ..!