ಜಮ್ಮು-ಕಾಶ್ಮೀರದಲ್ಲಿ ಆ. 370 ಮರುಸ್ಥಾಪನೆ ಆಗುವವರೆಗೂ ಭಾರತದಿಂದ ಸಕ್ಕರೆ, ಹತ್ತಿ ಆಮದು ಮಾಡಿಕೊಳ್ಳುವುದಿಲ್ಲ – ಇಮ್ರಾನ್..!
1 min read
ಜಮ್ಮು-ಕಾಶ್ಮೀರದಲ್ಲಿ ಆ. 370 ಮರುಸ್ಥಾಪನೆ ಆಗುವವರೆಗೂ ಭಾರತದಿಂದ ಸಕ್ಕರೆ, ಹತ್ತಿ ಆಮದು ಮಾಡಿಕೊಳ್ಳುವುದಿಲ್ಲ – ಇಮ್ರಾನ್..!
ಪಾಕಿಸ್ತಾನ್ : ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಭಾರತದ ನಡೆ ಖಂಡಿಸಿ ಪಾಕಿಸ್ತಾನ ಭಾರತದಿಂದ ಹತ್ತಿ ಹಾಗೂ ಸಕ್ಕರೆ ಆಮದಿಗೆ ಬ್ರೇಕ್ ಹಾಕಿತ್ತು. ಬಳಿಕ ಪಾಕ್ ನಲ್ಲಿ ಸಕ್ಕರೆ , ಹತ್ತಿ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗುವ ಜೊತೆಗೆ ಕೊರತೆಯೂ ಉಂಟಾಗಿತ್ತು. ಆದ್ರೂ ಪಕಿಸ್ತಾನ ಒಣಜಂಬ ಬಿಟ್ಟಿರಲಿಲ್ಲ.
ಆದ್ರೆ ಇತ್ತೀಚೆಗೆ ಏ.1 ರಂದು ನಡೆದ ಪಾಕಿಸ್ತಾನ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ, ಭಾರತದಿಂದ ಸಕ್ಕರೆ, ಹತ್ತಿ ಪೂರೈಕೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಇದರ ಅನ್ವಯ ಜೂ.30 ವರೆಗೆ ಭಾರತದಿಂದ 500,000 ಮೆಟ್ರಿಕ್ ಟನ್ ಗಳಷ್ಟು ವೈಟ್ ಶುಗರ್ ಹಾಗೂ ಹತ್ತಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಮುಂದಾಗಿತ್ತು.
ಆದ್ರೆ ಇದೀಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಮತ್ತೆ ಉಲ್ಟಾ ಹೊಡೆದಿದ್ದು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವವರೆಗೂ ಭಾರತದಿಂದ ಹತ್ತಿ, ಸಕ್ಕರೆ ಆಮದು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಮುಂದೆ ಸಿಗಲಿದೆ ‘ಬಾಲ್ ಆಧಾರ್’ ಕಾರ್ಡ್..!
ಮ್ಯಾಮ್ಮಾರ್ ಮಿಲಿಟರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬ್ರಿಟನ್..!
ಹಳಿ ತಪ್ಪಿದ ರೈಲು – 36 ಕ್ಕೂ ಹೆಚ್ಚು ಮಂದಿ ಸಾವು , 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!
ಮತ್ತೆ ಲಾಕ್ ಡೌನ್ ಫಿಕ್ಸ್..? ಒಂದೇ ದಿನ ದೇಶದಲ್ಲಿ ಪತ್ತೆಯಾಯ್ತು 81 ಸಾವಿರ ಕೇಸ್..!