Hijab Controvercy : ಟಿಪ್ಪು ಸುಲ್ತಾನ ಲಕ್ಷಾಂತರ ಹಿಂದೂಗಳನ್ನು ಕೊಂದ ದೇಶದ್ರೋಹಿ : ಪ್ರಮೋದ್ ಮುತಾಲಿಕ್
ಬಾಗಲಕೋಟೆ : ಬಂದುಗಳೇ ದೇಶ ಮೊದಲು, ಹಿಜಾಬ್ ಅಲ್ಲ.. ನಾವು ಸಂಕಲ್ಪಮಾಡಬೇಕಾಗಿದೆ.. ಇವತ್ತು ಶಿವಾಜಿ ಜಯಂತಿ. ಮೆರವಣಿಗೆಯಲ್ಲಿ ಮುಸ್ಲಿಂರು ಶರಬತ್ತು ಕೊಟ್ಟರು. ನೀವು ಕುಡಿದ್ರೊ ಇಲ್ಲೊ ಗೊತ್ತಿಲ್ಲ. ಉಗುಳಿ ಕೊಟ್ಟಿರ್ತಾರಿ ಉಗುಳಿ. ನೀವು ಗಟಗಟ ಕುಡದ್ರ? ಮಂಗ್ಯಾನ ಮಕ್ಕಳ್ರ ನಾಚಿಕೆ ಆಗಬೇಕು ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಆಕಳನ್ನು ಕಡಿತಾ ಇದಾರೆ ಸುಪ್ರೀಮ್ ಕೋರ್ಟ್ ಆದೇಶ ಒಪ್ಪುತ್ತಿಲ್ಲ. ಸಂವಿಧಾನಕ್ಕೆ ಬೆಲೆ ಕೊಡುತ್ತಿಲ್ಲ. ಟೆರರಿಸ್ಟ್ ಆಗುತ್ತಿದ್ದಾರೆ.. ಮತ್ತೆ ಹಿಂದು ಮುಸ್ಲಿಂ ಬಾಯಿ ಬಾಯಿ ಅಂತಿದ್ದಾರೆ.. ಟಿಪ್ಪು ಸುಲ್ತಾನ್ ಜಯಂತಿ ಮಾಡ್ತಾರೆ .. ಟಿಪ್ಪು ಸುಲ್ತಾನ ಲಕ್ಷಾಂತರ ಹಿಂದೂಗಳನ್ನು ಕೊಂದ ದೇಶದ್ರೋಹಿ..
ಟಿಪ್ಪು ಸಾವಿರಾರು ದೇವಸ್ಥಾನ ಒಡೆದ ನೀಚ ನಿರ್ಲಜ್ಜ.. ನೀವು ಯಾರಾದರೂ ಮುಸ್ಲಿಂರಿಗೆ ಟಿಪ್ಪು ಸುಲ್ತಾನ್ ದಿವಸ ಶರಬತ್ ಕೊಟ್ರೆ, ನಾನೇ ಬರುತ್ತೇನೆ ಚಪ್ಪಲಿ ಚಪ್ಪಲಿಲೆ ಹೊಡೆಯುತ್ತೇನೆ ಎಂದಿದ್ದಾರೆ..
ನಮ್ಮಂತಹ ಎಷ್ಟು ಜನರ ಜೀವನ ತೆಗೆದುಕೊಳ್ಳುತ್ತೀರಿ ನೀವು.. ಹಿಂದು ಹಿಂದು ಎಂದು ಸಾಯುತ್ತಿದ್ದೇವೆ ಎಂದು ಕೆಲ ಅಸಭ್ಯ ಪದ ಬಳಸಿ ಹಿಂದೂ ಕಾರ್ಯಕರ್ತರ ವಿರುದ್ದ ಗರಂ ಆಗಿದ್ದಾರೆ..
ಅಲ್ಲದೇ ನನಗೆ 62 ವರ್ಷ ಆಯ್ತು. ಆಯ್ತು ಮನೆ ಬಿಟ್ಟು 45 ವರ್ಷ ಆಯ್ತು.. ಮನೆ ಕಡೆ ಹಿಂದಿರುಗಿ ನೋಡಲಿಲ್ಲ ನಾನು.. 107 ಕೇಸ್ ಹಾಕಿದ್ದಾರೆ, ಸಾವಿರ ಕೇಸ್ ಹಾಕಲಿ. ಜಯಂತಿಗೆ ಬಂದೆ ನನಗೆ ಹೂಹಾರ ಕೊಟ್ರು.. ಒಂದು ತಲವಾರ್ ಕೊಡಲಿಲ್ಲ.. ಹೂಹಾರ ಸಾಕು.. ಈಗ ಪ್ರತಿಯೊಬ್ಬರ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳುವ ಕಾಲ ಬಂದಿದೆ.. ಅದು ದೇಶದ ರಕ್ಷಣೆಗೋಸ್ಕರ.. ನಮ್ಮ ತಾಯಂದಿರ ರಕ್ಷಣೆಗೋಸ್ಕರ.. ನಮ್ಮ ದೇವಸ್ಥಾನದ ರಕ್ಷಣೆಗೋಸ್ಕರ.. ಭಾರತ ಮಾತೆಯ ರಕ್ಷಣೆಗೋಸ್ಕರ. ಮನೆಯಲ್ಲಿ ಒಂದು ತಲವಾರ್. ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ…
ಇದೇ ವೇಳೆ , ಮುಕ್ರಾಂಖಾನ್ ಅಂತ ಸೇಡಂ ಕಾಂಗ್ರೆಸ್ ಅಧ್ಯಕ್ಷ ನಮ್ಮ ಸಂಘಟನೆ ರಾಜ್ಯದ ಅಧ್ಯಕ್ಷರಿಗೆ ಹಾಗೂ ವಿಜಯಪುರ ಶಾಸಕ ಯತ್ನಾಳ್ ಅವರನ್ನು ಕಡಿದು ತುಂಡ ಮಾಡ್ತಿವಿ ಅಂತ ಹೇಳ್ತಾನೆ. ಕಡಿಯಾಕ ಏನು ಕಬ್ಬಾ ಅವರು ಎನ್ನುವ ಜೊತೆಗೆ ಅವಾಚ್ಯ ಶಬ್ಧಗಳನ್ನ ಬಳಸಿ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ನಮ್ಮ ಅಧ್ಯಕ್ಷ ಆಂದೋಲನ ಸ್ವಾಮಿ ಆಯ್ತು ಕಡಿಬಾ ಅಂತ ಸೇಡಮ್ ಗೆ ಹೋದರೆ.. ಮುಕ್ರಮ್ ಖಾನ್ ಓಡಿ ಹೋಗ್ಯಾನ ಎಂದು ವ್ಯಂಗ್ಯವಾಡಿದ್ದಾರೆ…








