ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಹೀಗೊಂದು ಪ್ರಶ್ನೆ ಕೇಳಿದ ನೆಟ್ಟಿಗರು…?
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಮಿಂಚಿ , ತೆಲುಗು ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ಬ್ಯುಸಿಯಾಗಿರುವ ಬಹುಭಾಷಾ ನಟಿ ಪ್ರಣೀತಾ ಸುಬಾಷ್ ಸದ್ಯ ಗುಟ್ಟಾಗಿ ಮದುವೆಯಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.. ಅಭಿಮಾನಿಗಳು ಆಶ್ಚರ್ಯಕ್ಕೀಡಾಗಿದ್ದು, ಶುಭಾಷಯಗಳನ್ನ ತಿಳಿಸುತ್ತಿದ್ದಾರೆ. ಆದ್ರೆ ಇದ್ರಿಂದ ರಮ್ಯಾ ಸಹ ಸುದ್ದಿಯಲ್ಲಿದ್ದಾರೆ… ಹೌದು ಪೋಸ್ಟ್ ಗೆ ಸ್ಯಾಂಡಲ್‍ವುಡ್ ನ ಕ್ವೀನ್ ಮೋಹಕತಾರೆ ರಮ್ಯಾ ವಿಶ್ ಮಾಡಿದ್ದಾರೆ.
ಪ್ರಣೀತಾ ಮದುವೆಯಾಗಿರುವ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿ ಒಂದು ಲೆಟರ್ ಅನ್ನು ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ನಟಿ ರಮ್ಯಾ ಕಂಗ್ರಾಟ್ಸ್ ಪ್ರಣೀತಾ ಎಂದು ವಿಶ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವರು ನಿಮ್ಮ ಮದುವೆ ಯಾವಾಗ ಎಂದು ಕೇಳಿದರೆ ಒಬ್ಬರು, ಮೇಡಂ ನಿಮಗೆ ವಯಸ್ಸಾಗುತ್ತಿದೆ, ಆದಷ್ಟು ಬೇಗ ಮದುವೆ ಆಗಿಬಿಡಿ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಣೀತಾ ಮದುವೆ ಸುದ್ದಿಗಿಂತ ಹೆಚ್ಚಾಗಿ ರಮ್ಯಾ ಹೈಲೈಟ್ ಆಗ್ತಿರೋದು ಸುಳ್ಳಲ್ಲ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.