Pratap simha | ನಾನು ಇಂಜಿನಿಯರ್ ಅಲ್ಲ, ಜರ್ನಲಿಸಂ ಓದಿರುವವನು
ಮಂಡ್ಯ : ನಾನು ಇಂಜಿನಿಯರ್ ಅಲ್ಲ, ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕದ ಬಗ್ಗೆ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು – ಬೆಂಗಳೂರು ದಶಪಥ ರಸ್ತೆ ಅವೈಜ್ಞಾನಿಕ ಕಾಮಗಾರಿ ಕುರಿತು ಸಂಸದೆ ಸುಮಲತಾ ಅವರು ಆರೋಪಿಸಿದ್ದರು.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ನಾನು ಇಂಜಿನಿಯರ್ ಅಲ್ಲ, ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕದ ಬಗ್ಗೆ ಗೊತ್ತಿಲ್ಲ.

ಮಂಡ್ಯ, ರಾಮನಗರ ಜಿಲ್ಲೆಯ ಯಾರೇ ಬಂದರು ಕೆಲಸ ಹೇಳಿ ಮಾಡ್ತೇನೆ.
ಅವೈಜ್ಞಾನಿಕದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಇಂಜಿನಿಯರ್ ಅಲ್ಲ ಎಂದು ಹೇಳಿದ್ದಾರೆ.
ನಾನು ಜರ್ನಲಿಸಂ ಓದಿರುವವನು. ಬೇರೆಯವರಿಗೆ ಏನು ಅವೈಜ್ಞಾನಿಕ ಅನ್ಸಿರಬಹುದು.
ಈ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ, ಓಡಾಡಿದವರೇಲ್ಲ ಚೆನ್ನಾಗಿದೆ ಅಂತ ಹೇಳ್ತಿದ್ದಾರೆ.
ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.