ಮೈಸೂರು : ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ನಡೆಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ವೀರ್ ಸಾರ್ವಕರ್ ನಾಮಕರಣ ಮಾಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷಗಳ ನಾಯಕರಿಗೆ ಸಂಸದ ಪ್ರತಾತ್ ಸಿಂಹ. ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕ ಕ್ಯಾಂಟಿನ್ ನೆನಪಾಗಲಿಲ್ಲವಾ? ನಾಗರಹೊಳೆ, ಬಂಡೀಪುರ ಉದ್ಯಾನವನಕ್ಕೆ ಗಾಂಧಿ, ನೆಹರು ಕುಟುಂಬಿಕರ ಹೆಸರಿಡುವಾಗ ಕನ್ನಡದವರ ನೆನಪಾಗಲಿಲ್ವ? ಈಗ ಮಾತ್ರ ಅವರಿಗೆ ಕನ್ನಡದವರ ನೆನಪು ಬಂದಿದಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕನಕ ಕ್ಯಾಂಟಿನ್ ಎಂದು ಹೆಸರು ಇಡಲು ನೆನಪಾಗಿಲ್ಲವಾ ಎನ್ನುವ ಮೂಲಕ ಸಿದ್ದರಾಮಯ್ಯ ಅವರನ್ನು ಕಾಲೆಳೆದಿದ್ದಾರೆ.
ವೀರ ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರಿಡಲು ಇವರು ಯಾಕೆ ವಿರೋಧ ಮಾಡುತ್ತಾರೋ ಗೊತ್ತಿಲ್ಲ. ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ವೀರ ಸಾವರ್ಕರ್ ಇದ್ದ ಜೈಲು ನೋಡಿ ಬರಲಿ ಇವರು ಎಂದಿದ್ದಾರೆ. ಜನ ಸಾಮಾನ್ಯರು ತುಂಬ ಬುದ್ದಿವಂತರಾಗಿದ್ದಾರೆ. ಕಾಂಗ್ರೆಸ್ ದಡ್ಡತನ ಪ್ರದರ್ಶನ ಮಾಡಬಾರದು. ಈಗಲಾದರೂ ಕಾಂಗ್ರೆಸ್ ಎಚ್ಚೆತ್ತಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.








