ADVERTISEMENT
Thursday, July 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ಹೇಳಿಕೆಗಳ ಮೇಲಾಟ ಬಿಟ್ಟು, ಡ್ಯಾಂ ಬಿರುಕು ಬಿಟ್ಟಿರೋದನ್ನ ಸಾಬೀತು ಮಾಡಿ”

Mahesh M Dhandu by Mahesh M Dhandu
July 9, 2021
in Newsbeat, Politics, ರಾಜಕೀಯ
Prathap simha
Share on FacebookShare on TwitterShare on WhatsappShare on Telegram

“ಹೇಳಿಕೆಗಳ ಮೇಲಾಟ ಬಿಟ್ಟು, ಡ್ಯಾಂ ಬಿರುಕು ಬಿಟ್ಟಿರೋದನ್ನ ಸಾಬೀತು ಮಾಡಿ”

ಮಡಿಕೇರಿ : ಹೇಳಿಕೆಗಳ ಮೇಲಾಟ ಬಿಟ್ಟು, ಕೆಆರ್ ಎಸ್ ಬಿರುಕು ಬಿಟ್ಟಿರೋದನ್ನ ಸಾಬೀತು ಮಾಡಿ ಎಂದು ಸಂಸದೆ ಸುಮಲತಾ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದಾರೆ.

Related posts

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

July 2, 2026
ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

July 2, 2026

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸುಮಲತಾ ಅವರ ನಟನೆ ಬಗ್ಗೆ ಬಹಳ ಗೌರವ ಇದೆ. ಅಂಬರೀಷ್ ಅವರನ್ನು ನೋಡೋದಕ್ಕೆ ಅವರ ಮನೆಗೆ ಹೋಗ್ತಿದ್ದೆ.

ಸಿನಿಮಾ ನಟನೆಗೂ,ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ. ನಿನ್ನೆ ನಾನು ಯಾರೋ ಒಬ್ಬರ ಪರವಾಗಿ ಮಾತನಾಡಿಲ್ಲ. ಕೆಆರ್‍ಎಸ್ ಯಾರೊಬ್ಬರ ಆಸ್ತಿ ಅಲ್ಲ.

ಜಲಾಶಯಕ್ಕೆ ನನ್ನ ಕ್ಷೇತ್ರದ ಕೊಡಗಿನ ಕಾವೇರಿಯಿಂದ ನೀರು ಬರುತ್ತೆ. ಬಿರುಕು ಬಿಟ್ಟಿದೆ ಅಂದವರು ಅವರು, ಅದನ್ನ ತೋರಿಸಲಿ. ಈ ವಿಚಾರವನ್ನಷ್ಟೆ ನಾನು ಹೇಳಿದ್ದು ಎಂದು ಹೇಳಿದರು.

ಇನ್ನು ನಾನು ಮೈಸೂರು-ಕೊಡಗು ಸಂಸದ ಅನ್ನುವ ಬಗ್ಗೆ ಜನರಿಗೆ ಗೊಂದಲ ಇಲ್ಲ. ನಾನು ಮೈಸೂರಿನಲ್ಲೇ ವಾಸವಿದ್ದೇನೆ. ಕೊಡಗಿಗೂ ಬರ್ತಿರ್ತೇನೆ, ಅಭಿವೃದ್ಧಿ ಕಾರ್ಯ ಮಾಡ್ತಿದ್ದೇನೆ.

ಗೊಂದಲ ಮಂಡ್ಯದವರಿಗೆ ಇರುತ್ತೆ. ನಾವು ವೋಟ್ ಹಾಕಿದವ್ರು ಎಲ್ಲಿದ್ದಾರೆ ಅಂತ ಗೊಂದಲ ಇದೆ. ಮಂಡ್ಯದವರಿಗೆ ಗೊಂದಲ ಇದೆ ಹೊರತು ಕೊಡಗು-ಮೈಸೂರಿನವರಿಗೆ ಇಲ್ಲ. ನಾನು ಜನರ ಮನೆ ಬಾಗಿಲಲ್ಲಿದ್ದೇನೆ ಎಂದು ಪರೋಕ್ಷವಾಗಿ ಸುಮಲತಾ ಅವರಿಗೆ ಟಾಂಗ್ ನೀಡಿದರು.

Prathap simha

ಕೆಆರ್ ಎಸ್ ಬಿರುಕು ಬಿಟ್ಟಿದ್ದರೆ ತೋರಿಸಿಕೊಡಲಿ. ಇಲ್ಲಾ ಅಂದರೆ ಹೇಳಿದ್ದು ತಪ್ಪಾಗಿದೆ ಎಂದು ಸುಮ್ಮನಾಗಲಿ. ಅಷ್ಟೇ ನನ್ನ ಮನವಿ ಎಂದ ಪ್ರತಾಪ್ ಸಿಂಹ, ಕೆಆರ್ ಎಸ್‍ಗೆ ನೀರು ಕೊಡಗಿನಿಂದ ಬರುತ್ತೆ.

ಬಿರುಕು ಬಿಟ್ಟಿದೆ ಅನ್ನೋದು ಗಂಭೀರ ವಿಚಾರವಾಗಿದ್ದು, ಸರಿಯಾದ ಮಾಹಿತಿ ಇದ್ರೆ ಸರಿಪಡಿಸೋದಕ್ಕೆ ಮುಖ್ಯಮಂತ್ರಿಯನ್ನು ಕೇಳೋಣ.

ಸಾಕ್ಷಿಗಳಿದ್ದರೆ ಬಹಿರಂಗಪಡಿಸಿ, ತಪ್ಪು ಮಾಹಿತಿ ಇದ್ರೆ ಅದನ್ನೂ ಒಪ್ಕೊಳಿ. ಕೆಆರ್ ಎಸ್ ಮಂಡ್ಯ ಸಂಸದರ ಆಸ್ತಿ ಅಲ್ಲ. ಇದು ಎಲ್ಲರಿಗೂ ಸೇರಿದ್ದು, ರಾಜ್ಯದ ರಾಷ್ಟ್ರದ ಆಸ್ತಿ ಎಂದರು.

ಇದೇ ವೇಳೆ ಅಂಬರೀಷ್ ಹೆಸರು ಪ್ರಸ್ತಾಪದ ಬಗ್ಗೆ ಅಸಮಾಧಾನ ಹೊರಹಾಕಿದ ಪ್ರತಾಪ್ ಸಿಂಹ, ಅಂಬರೀಷಣ್ಣ ರಾಜ್ಯ ಕಂಡ ಒಳ್ಳೆಯ ನಟ. ಹೃದಯವಂತಿಕೆ ಇದ್ದ ನಟ, ಕರ್ಣ ಅಂತ ಕರೆಯುತ್ತೇವೆ.

ದಾನ ಧರ್ಮದಲ್ಲಿ ಎತ್ತಿದ ಕೈ ಆಗಿದ್ರು. ಅವರ ವಿಚಾರ ಇಲ್ಲಿ ಪ್ರಸ್ತಾಪ ಆಗೋದು ಬೇಡ. ಅವರಿಗೆ ಇಡೀ ರಾಜ್ಯ ಗೌರವ ಕೊಡಬೇಕು. ಅವರನ್ನ ನಾವು ಹೃದಯದಲ್ಲಿಟ್ಟು ಆರಾಧಿಸುತ್ತೇವೆ. ಅವರನ್ನು ಯಾರೂ ಈಗ ಎಳೆತರೋದು ಬೇಡ. ಹೇಳಿಕೆಗಳ ಮೇಲಾಟ ಬಿಟ್ಟು ಬಿರುಕು ಬಿಟ್ಟಿದೆಯೇ ಅನ್ನೋದನ್ನ ಸಾಬೀತುಮಾಡಬೇಕು ಎಂದು ವಿನಂತಿಸಿಕೊಂಡರು.

Tags: AmbarishkrsMadikeriPrathap simhaSumalatha
ShareTweetSendShare
Join us on:

Related Posts

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

by Shwetha
July 2, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಈಗ...

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ...

ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

by Shwetha
July 2, 2026
0

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ...

ಮೋದಿಯವರ ಪ್ರಶಸ್ತಿ ವ್ಯಾಮೋಹಕ್ಕೆ ದೇಶದ ತೆರಿಗೆ ಹಣ ಬಲಿ ಕಾಂಗ್ರೆಸ್ ಮತ್ತು ಟಿಎಂಸಿ ಗಂಭೀರ ಆರೋಪ

ಮೋದಿಯವರ ಪ್ರಶಸ್ತಿ ವ್ಯಾಮೋಹಕ್ಕೆ ದೇಶದ ತೆರಿಗೆ ಹಣ ಬಲಿ ಕಾಂಗ್ರೆಸ್ ಮತ್ತು ಟಿಎಂಸಿ ಗಂಭೀರ ಆರೋಪ

by Shwetha
July 2, 2026
0

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷೆಲ್ಸ್ ರಾಷ್ಟ್ರವು ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್ ಎಂಬ ಪ್ರಶಸ್ತಿ ನೀಡಿ ಗೌರವಿಸಿರುವುದು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ...

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬಿಜೆಪಿಗೆ ದೇಶಕ್ಕಿಂತ ದೇಣಿಗೆಯೇ ದೊಡ್ಡದು ಅಯೋಧ್ಯೆ ಹಗರಣಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

by Shwetha
July 2, 2026
0

ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳಿಗೆ ದೇಶದ ಹಿತಕ್ಕಿಂತ ದೇಣಿಗೆ ಸಂಗ್ರಹವೇ ಮುಖ್ಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram