ಶಿವಣ್ಣನಿಗಾಗಿ ರಿಲೀಸ್ ಡೇಟ್ ಮುಂದೂಡಿದ ‘ಪ್ರೇಮಂ ಪೂಜ್ಯಂ’..!
ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನೆನಪಿರಲಿ ಪ್ರೇಮ್ ಇದೀಗ ಬಹುನಿರೀಕ್ಷಿತ ಪ್ರೇಮಂ ಪೂಜ್ಯಂ ಸಿನಿಮಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಕ್ಯಾರೆಕ್ಟರ್ ನಿಭಾಯಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ನಡುವೆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಮತ್ತೊಮ್ಮೆ ಚಿತ್ರದ ರಿಲೀಸ್ ಡೇಟ್ ಅನ್ನ ಮುಂದಕ್ಕೆ ಹಾಕಿದೆ ಸಿನಿಮಾ ತಂಡ.
ಹೌದು ಕಳೆದ ದಿನ ಸೆನ್ಸಾರ್ ಪರೀಕ್ಷೆಯನ್ನ ಯಶಸ್ವಿಯಾಗಿ ಪೂರೈಸಿ UA ಸರ್ಟಿಫಿಕೇಟ್ ಪಡೆದಿರುವ ‘ಪ್ರೇಮಂ ಪೂಜ್ಯಂ’ ಮೂರು ತಿಂಗಳಿನಿಂದ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತ ಪ್ರಚಾರದ ಪಡಸಾಲೆಯಲ್ಲಿ ಸೌಂಡ್ ಮಾಡುತ್ತಾ ಬಂದಿದೆ.
ಈಗ ರಿಲೀಸ್ ವಿಚಾರದಲ್ಲಿ ದೊಡ್ಡ ನಿರ್ಧಾರಕ್ಕೆ ಬಂದಿರುವ ಪ್ರೇಮಂ ಪೂಜ್ಯಂ ಸಿನಿ ತಂಡ, ಮತ್ತೊಮ್ಮೆ ಬಿಡುಗಡೆ ದಿನಾಂಕ ಮುಂದೂಡಿದೆ.
ಇದಕ್ಕೆ ಒಂದು ಬಲವಾದ ಕಾರಣವೂ ಇದೆ. ಅಕ್ಟೋಬರ್ 29ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಎಲ್ರಿಗೂ ಗೊತ್ತೇ ಇರೋ ಹಾಗೇ ಅದೇ ದಿನವೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ತೆರೆಗಪ್ಪಳಿಸಲಿದೆ. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಲು ಸಿನಿ ತಂಡ ಪ್ಲಾನ್ ಮಾಡಿದೆ.
ಒಂದೊಳ್ಳೆ ಡೇಟ್ ಗೆ ಜನರನ್ನ ದೊಡ್ಡ ಮಟ್ಟಕ್ಕೆ ಥಿಯೇಟರ್ ಕಡೆ ಕರೆತರಲು ಚಿತ್ರ ತಂಡ ಹೊಸ ಪ್ಲಾನ್ ಮಾಡಿಕೊಂಡಿದ್ದು, ‘ಪ್ರೇಮಂ ಪೂಜ್ಯಂ’ ಸಿನಿಮಾದ ಹೊಸ ರಿಲೀಸ್ ಡೇಟ್ ಅನ್ನ ಚಿತ್ರತಂಡ ಶೀಘ್ರದಲ್ಲೇ ಅನೌನ್ಸ್ ಮಾಡಲಿದೆ.
ಇದು ಸ್ಯಾಂಡಲ್ ವುಡ್ ಸಿನಿ ರಂಗದ ಹಿತದೃಷ್ಟಿಯಿಂದ ಚಿತ್ರತಂಡ ತೆಗೆದು ಕೊಳ್ತಿರುವ ನಿರ್ಧಾರ…