ಅಕಾಲಿಕ ಮಳೆಗೆ ಕರುನಾಡು ಕಂಗಾಲು..! karnataka saaksha tv
ಬೆಂಗಳೂರು : ಅಕಾಲಿಕ ಮಳೆಗೆ ಕರುನಾಡು ಕಂಗಾಲಾಗಿದೆ. ರಾಜ್ಯದಲ್ಲಿ ಬಿಟ್ಟುಬಿಡಲೇ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಸೂರ್ಯ ಕಳೆದುಹೋಗಿದ್ದಾನೇನೋ ಅನ್ನುವಂತೆ ಮಳೆರಾಯನ ಅಬ್ಬರಕ್ಕೆ ಸೂರ್ಯದೇವ ಮರೆಯಾಗಿದ್ದಾನೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ ನಾನಾ ಅವಾಂತರಗಳನ್ನು ಸೃಷ್ಠಿಸಿದ್ದಾರೆ.
ಸಾವಿರಾರೂ ಎಕರೆ ಬೆಳೆ ನೀರುಪಾಲಾಗಿದೆ. ನೂರಾರು ಕೆರೆಗಳು ಕೋಡಿ ಹೊಡೆದು ಸಾವಿರಾರು ಎಕರೆ ಜಮೀನುಗಳು ಜಲಮಯವಾಗಿದೆ.
ಇನ್ನು ಬಿಟ್ಟುಬಿಡದೇ ಸುರಿದ ಮಳೆಗೆ ಸಾಕಷ್ಟು ಗ್ರಾಮಗಳು ನಡುಗಡ್ಡೆಗಳಾಗಿದ್ದರೇ ಮನೆಗಳು ಕುಸಿದಿವೆ. ಮರಗಳು ಧರೆಗುರುಳಿವೆ.
ಈ ಮಧ್ಯೆ ನವೆಂಬರ್ 23 ಅಂದರೆ ಮಂಗಳವಾರದವರೆಗೂ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.









