ಕೊರೊನಾ ಮೂರನೇ ಅಲೆಗೆ ಸಿದ್ಧತೆ : ಜೂ.3ಕ್ಕೆ ತಜ್ಞರ ಜತೆ ಸಿಎಂ ಸಭೆ Corona
ಬೆಂಗಳೂರು : ಕೊರೊನಾ ಮೂರನೇ ಅಲೆ ಬಗ್ಗೆ ತಜ್ಞರು ಈಗಾಗಲೇ ಮುನ್ನಚ್ಚರಿಕೆ ನೀಡಿದ್ದು, ಈ ಬಗ್ಗೆ ಚರ್ಚಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಜೂನ್ ಮೂರರಂದು ಸಭೆ ನಡೆಸಲಿದ್ದಾರೆ.
ಜೂನ್ 3 ರಂದು ತಾಂತ್ರಿಕ ತಜ್ಞರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಡಾ ದೇವಿಶೆಟ್ಟಿ ನೇತೃತ್ವದ ತಾಂತ್ರಿಕ ತಜ್ಞರ ಸಮಿತಿ ಜೊತೆ ಸಿಎಂ ಚರ್ಚಿಸಲಿದ್ದು, 3ನೇ ಅಲೆ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ನಡೆಲಿದ್ದಾರೆ.
ಮೂರನೇ ಅಲೆಯನ್ನು ಗಮನದಲ್ಲಿಟ್ಟಿಕೊಂಡು ಸದ್ಯ ರಾಜ್ಯದಲ್ಲಿ ಜಾರಿಯಾಲ್ಲಿರುವ ಲಾಕ್ ಡೌನ್ ವಿಸ್ತರಣೆ ಮಾಡಬೇಕಾ..? ಬೇಡ್ವಾ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.