ಚೆನ್ನೈ ಟೆಸ್ಟ್ ಗೆ ಸಿದ್ಧತೆ : ಹೋಟೆಲ್ ರೂಂನಲ್ಲಿ ಕೊಹ್ಲಿ ವರ್ಕೌಟ್
ಚೆನ್ನೈ : ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಇದೇ ಫೆಬ್ರವರಿ 5ರಿಂದ ಆರಂಭವಾಗಲಿದ್ದು, ಈಗಾಗಲೇ ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೂರು ದಿನಗಳ ಕ್ವಾರಂಟೈನ್ ಗೊಳಗಾಗಿದ್ದಾರೆ.
https://www.instagram.com/p/CKnsxNWAzNl/?utm_source=ig_web_copy_link
ಕಳೆದ ಒಂದು ತಿಂಗಳಿನಿಂದ ತಂಡದಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಇದೀಗ ತಂಡವನ್ನ ಸೇರಿಕೊಂಡಿದ್ದು, ಕ್ವಾರಂಟೈನ್ ಆಗಿರುವ ಹೋಟೆಲ್ ರೂಮಿನಲ್ಲಿ ವರ್ಕೌಟ್ ಮಾಡ್ತಿದ್ದಾರೆ.
ಅದರ ವಿಡಿಯೋ ತುಣುಕುವೊಂದನ್ನ ತಮ್ಮ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಜನವರಿ 11ರಂದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಫೆಬ್ರವರಿ 5ರಂದು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








