ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಾರ್ಚ್ 30 ರಂದು ಹಾರ್ಟ್ ಬೈಪಾಸ್ ಸರ್ಜರಿ
ರಾಷ್ಟ್ರಪತಿ ಭವನದ ಹೇಳಿಕೆಯ ಪ್ರಕಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ 30 ರಂದು ಹಾರ್ಟ್ ಬೈಪಾಸ್ ಪ್ರಕ್ರಿಯೆಗೆ ಒಳಗಾಗಲಿದ್ದಾರೆ.
75 ವರ್ಷದ ರಾಮನಾಥ್ ಕೋವಿಂದ್ ಅವರನ್ನು ಶನಿವಾರ ಮಧ್ಯಾಹ್ನ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಯಿತು. ತಪಾಸಣೆಯ ನಂತರ, ವೈದ್ಯರು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದರು. ರಾಷ್ಟ್ರಪತಿ ಅವರ ಆರೋಗ್ಯವು ಸ್ಥಿರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎದೆಯ ನೋವಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಶುಕ್ರವಾರ ಬೆಳಿಗ್ಗೆ ದೆಹಲಿಯ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಅವರನ್ನು ಏಮ್ಸ್ ಗೆ ವರ್ಗಾಯಿಸಲಾಯಿತು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದಲ್ಲಿದ್ದಾರೆ. ಅವರು ರಾಮನಾಥ್ ಕೋವಿಂದ್ ಅವರ ಮಗನೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ, ರಾಷ್ಟ್ರಪತಿ ಅಧಿಕೃತ ಟ್ವಿಟರ್ ನಲ್ಲಿ, “ವಾಡಿಕೆಯ ತಪಾಸಣೆಯ ನಂತರ ರಾಷ್ಟ್ರಪತಿ ಅವರು ಅಬ್ಸರ್ವೇಶನ್ ನಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಮತ್ತು ಅವರಿಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಲಾಗಿದೆ.
ಗೋಡಂಬಿ ಹಾಲಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ#healthtips #cashew #health #milk https://t.co/ScQrX4nnSF
— Saaksha TV (@SaakshaTv) March 22, 2021
ಹೈದರಾಬಾದಿ ಮಟನ್ ದಮ್ ಬಿರಿಯಾನಿ#recipes #muttonbiryani #food https://t.co/rdecTf9drv
— Saaksha TV (@SaakshaTv) March 22, 2021
ಎಲ್‌ಟಿಸಿ ನಗದು ಚೀಟಿ ಯೋಜನೆಯನ್ನು ಹೇಗೆ ಪಡೆಯುವುದು ? ಇಲ್ಲಿದೆ ಮಾಹಿತಿ https://t.co/QYkGNiqfNC
— Saaksha TV (@SaakshaTv) March 22, 2021
ಆಲಿಯಾ ಯಾವತ್ತೂ ಮದುವೆಯಾಗಬಾರದು ಎಂದು ಬೆದರಿಕೆ ಹಾಕಿದ ಮಹೇಶ್ ಭಟ್ https://t.co/N0tImKAtRF
— Saaksha TV (@SaakshaTv) March 21, 2021