Presidential Poll : ಗಾಂಧಿ ಮೊಮ್ಮಗ ಗೋಪಾಲ್ ಕೃಷ್ಣ ಹೆಸರು ಮುನ್ನಲೆಗೆ
ರಾಷ್ಟ್ರಪತಿ ಎಲೆಕ್ಷನ್ ಅಖಾಡಕ್ಕೆ ವಿಪಕ್ಷಗಳ ಜಂಟಿ ಅಭ್ಯರ್ಥಿ ರೇಸ್ ನಲ್ಲಿ ಗೋಪಾಲಕೃಷ್ಣ ಗಾಂಧಿ ಹೆಸರು ಮುನ್ನಲೆಗೆ ಬಂದಿದೆ.
ಎಡಪಕ್ಷಗಳೆಲ್ಲವೂ ಸೇರಿ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಸೂಚಿಸಿವೆ ಎಂದು ವರದಿಯಾಗಿದೆ.
ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ವಿಪಕ್ಷಗಳ ಕಸರತ್ತಿನ ನಡುವೆಯೇ ಕೆಲವು ನಾಯಕರು ಪರ್ಯಾಯ ಮಾರ್ಗವಾಗಿ ಗೋಪಾಲಕೃಷ್ಣ ಗಾಂಧಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಗೋಪಾಲಕೃಷ್ಣ ಅವರು ಪಶ್ಚಿಮ ಬೆಂಗಾಲ್ ಗರ್ವನರ್ ಆಗಿ ಕೆಲಸ ಮಾಡಿದ್ದರು.
2017 ರಲ್ಲಿ ಉಪರಾಷ್ಟ್ರಪತಿ ಎಲಕ್ಷನ್ ನಲ್ಲಿ ಗೋಪಾಲ್ ಗಾಂಧಿಯವರು ಸ್ಪರ್ಧೆ ಮಾಡಿದ್ದರು.
ಆದ್ರೆ ಆಗ ವೆಂಕಯ್ಯ ನಾಯ್ಡು ಉಪರಾಷ್ಟಪತಿಯಾಗಿ ಗೆಲುವು ಸಾಧಿಸಿದ್ದರು.








