ಕಾಂಗ್ರೆಸ್ ನಲ್ಲಿ ಪ್ರತಿಷ್ಠೆ ಆಟ | ಹುಲಿಯಾ – ಬಂಡೆ ಮಧ್ಯೆ ಶೀತಲ ಸಮರ

1 min read
dk shivakumar

ಕಾಂಗ್ರೆಸ್ ನಲ್ಲಿ ಪ್ರತಿಷ್ಠೆ ಆಟ | ಹುಲಿಯಾ – ಬಂಡೆ ಮಧ್ಯೆ ಶೀತಲ ಸಮರ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಇಷ್ಟು ದಿನ ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಈಗ ಸ್ಫೋಟಗೊಂಡಿದೆ. ಪಕ್ಷದಲ್ಲಿ ನಾನೇ ಸುಪ್ರಿಂ.. ನನ್ನ ಮಾತೇ ನಡೆಯಬೇಕು.. ನಾನೇ… ನಾನೇ ಅನ್ನೋದು ಕಾಂಗ್ರೆಸ್ ಪಕ್ಷವನ್ನ ಎರಡು ಭಾಗ ಮಾಡಿದೆ… ಮಾಡುತ್ತಿದೆ. ಮೇಲ್ನೋಟಕ್ಕೆ ನಾವೆಲ್ಲಾ ಒಂದೇ ಅಂತಾ ಹೇಳಿಕೊಳ್ಳುತ್ತಿದ್ದರೂ ನಡುವಳಿಕೆ ಮಾತ್ರ ಒಂದಾಗಿಲ್ಲ. ಇದು ಪಕ್ಷಕ್ಕೆ ಪ್ರತಿ ಬಾರಿ ಡ್ಯಾಮೆಜ್ ಮಾಡುತ್ತಿದೆ.

ಇನ್ನು ವಿಷಯಕ್ಕೆ ಬಂದ್ರೆ ಮೈಸೂರು ಮೇಯರ್ ಚುನಾವಣೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಮತ್ತೆ ಸಾಭೀತು ಮಾಡಿದೆ. ಸಿದ್ದರಾಮಯ್ಯ ಅವರ ಮಾತನ್ನ ಕಡೆಗಣಿಸಿ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡಿರುವುದು ಸಿದ್ದು ಬೆಂಬಲಿಗರ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. ಸ್ವತಃ ಸಿದ್ದರಾಮಯ್ಯನವರೇ ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

congress

ಈ ಮಧ್ಯೆ ಪಕ್ಷದಲ್ಲಿ ಏನೇ ತೀರ್ಮಾನ ತೆಗದುಕೊಂಡ್ರು ನನ್ನ ಗಮನಕ್ಕೆ ಬರುತ್ತಿಲ್ಲ. ನಾನು ನಿಜಕ್ಕೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರಂತೆ.

ಇನ್ನು ಸಿದ್ದರಾಮಯ್ಯ ಅವರ ಬೆಂಬಲಿಗರು ಕೂಡ ಇದನ್ನ ಇಲ್ಲಿಗೆ ಬಿಡಿಬೇಡಿ ಸರ್..ಇದಕ್ಕೆ ತಾರ್ಕಿಕ್ ಅಂತ್ಯ ಕಾಣಿಸಬೇಕು. ಇಲ್ಲಾದಿದ್ರೆ ಕಾಂಗ್ರೆಸ್ ಪಕ್ಷದಲ್ಲಿ ಓನ್ ಮ್ಯಾನ್ ಶೋ ಆಗಲಿದೆ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ ನನ್ನ ಜೊತೆ ಚರ್ಚೆ ಮಾಡಿಲ್ಲ. ಪುಲಿಕೇಶಿನಗರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್ ಸೇರ್ಪಡೆ ಬಗ್ಗೆಯೂ ಮಾಹಿತಿ ಕೊಟ್ಟಿಲ್ಲ. ಎಲ್ಲ ಇವರಿಗೆ ಏನ್ ಬೇಕೋ ಅದನ್ನ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದಾರೆ ಅನ್ನೋ ಖಬರ್.

ಒಟ್ಟಾರೆ ಆಡಳಿತ ಸರ್ಕಾರದ ಲೋಪಗಳನ್ನ ಹುಡುಕಿ, ರಚನಾತ್ಮಕ ಟೀಕೆ ಮಾಡಬೇಕಾಗಿದ್ದ ಕಾಂಗ್ರೆಸ್ ಈಗ ಒಡೆದ ಮನೆಯಾಗಿರುವುದು ದುರದೃಷ್ಠಕರ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd