ನವದೆಹಲಿ: ಅಭಿವೃದ್ಧಿಗಾಗಿ ಮಧ್ಯಪ್ರದೇಶವನ್ನು ಬಿಜೆಪಿಗೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ(Madhya Pradesh Election) ಪ್ರಚಾರದ ಬದಲಾಗಿ ಸಾರ್ವಜನಿಕರಿಂದ ಆಶೀರ್ವಾದ ಪಡೆಯುವ ಅಭಿಯಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲಿಯ ಮೂಲೆ ಮೂಲೆಗೆ ತಲುಪಿ ನಾನು ಪ್ರಚಾರ ನಡೆಸಿ, ಜನರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಬಿಜೆಪಿ ಮೇಲೆ ಜನರಿಗೆ ಇರುವ ಪ್ರೀತಿ, ಬಿಜೆಪಿ (BJP) ಮೇಲೆ ಇಟ್ಟಿರುವ ನಂಬಿಕೆಯೇ ನಮ್ಮ ದೊಡ್ಡ ಆಸ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಮಹಿಳಾ ಶಕ್ತಿಯೇ ಮುಂದೆ ಬಂದು ಬಿಜೆಪಿಯ ಬಾವುಟ ಹಾರಿಸುತ್ತಿದೆ. ಮಹಿಳಾ ಸಬಲೀಕರಣವು ಬಿಜೆಪಿಯ ಆದ್ಯತೆಯಾಗಿದೆ. ಮಹಿಳೆಯರು ಬಿಜೆಪಿ ಸರ್ಕಾರವನ್ನು ತಮ್ಮ ಆದ್ಯತೆಯನ್ನಾಗಿ ಮಾಡಿದ್ದಾರೆ. ಭಾರತದ ಮುಂದಿನ 25 ವರ್ಷಗಳನ್ನು ಮತ್ತು ತಮ್ಮದೇ ಆದ 25 ವರ್ಷಗಳನ್ನು ಒಟ್ಟಿಗೆ ನೋಡುತ್ತಿದೆ. ಅದಕ್ಕಾಗಿಯೇ ನಮ್ಮ ಯುವಕರು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಪೂರೈಸಲು ಹೆಗಲಿಗೆ ಹೆಗಲು ಕೊಟ್ಟು ಮುಂದೆ ಬರುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.