UP Election – 3ನೇ ಹಂತದ ಚುನಾವಣೆ ವೇಳೆ 4ನೇ ಹಂತದಲ್ಲಿ ರ್ಯಾಲಿ ನಡೆಸಿದ ಪ್ರಧಾನಿ..
ಉತ್ತರ ಪ್ರದೇಶದಲ್ಲಿ ಇಂದು ಮೂರನೇ ಹಂತದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ 4 ನೆ ಹಂತದ ಚುನಾವಣಾ ಪ್ರದೇಶದಲ್ಲಿ ರ್ಯಾಲಿ ನಡೆಸಿದರು. ಯುಪಿ ಯ ಹರ್ದೋಯಿಯಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಅನ್ನು ತೀವ್ರವಾಗಿ ಗುರಿಯಾಗಿಸಿಕೊಂಡು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ‘ಈ ಬಾರಿ ಯುಪಿ ಜನರು ಎರಡು ಬಾರಿ ಹೋಳಿ ಆಡಲು ನಿರ್ಧರಿಸಿದ್ದಾರೆ. ಮಾರ್ಚ್ 10 ರಂದು ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಹೋಳಿ ನಡೆಯಲಿದೆ. ಮಾ.10ರಂದು ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕಾದರೆ ಈಗಿನಿಂದಲೇ ಮತಗಟ್ಟೆಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಎಂದು ಜನರಿಗೆ ಹೇಳಿದರು. Prime Minister Narendra Modi held a rally for campaigning for the fourth phase of elections in Hardoi.
ಮೂರನೇ ಹಂತದ ಚುನಾವಣೆ ಬಗ್ಗೆ ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಗೆಲುವು ಸಾಧಿಸಲಿದೆ. ‘ಮೂರನೇ ಹಂತದಲ್ಲಿಯೂ ಕಮಲದ ಚಿಹ್ನೆಯ ಮೇಲೆ ಭಾರಿ ಮತದಾನವಾಗಿದೆ. ನನಗೆ ಇಲ್ಲಿಯವರೆಗೆ ಬಂದಿರುವ ಸುದ್ದಿಗಳು ತುಂಬಾ ಉತ್ಸಾಹ ತಂದಿದೆ. ಇಂದು ಯುಪಿ ಜೊತೆಗೆ ಪಂಜಾಬ್ ನ ಜನರೂ ಮತ ಚಲಾಯಿಸುತ್ತಿದ್ದಾರೆ. ಪಂಜಾಬ್‌ನ ಅಭಿವೃದ್ಧಿ, ಏಕತೆ ಮತ್ತು ಭದ್ರತೆಗಾಗಿ ಅಲ್ಲಿನ ಜನರು ಕೂಡ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಎಂದು ಮೋದಿ ಹೇಳಿದರು.