‘ಆಜಾದಿ ಕೆ ಅಮೃತ್ ಮಹೋತ್ಸವ್’ ಕಾರ್ಯಕ್ರಮ ಉದ್ಘಾಟಿಸಿದ ಮೋದಿ…
‘ಆಜಾದಿ ಕೆ ಅಮೃತ್ ಮಹೋತ್ಸವ ಸೆ ಸ್ವರ್ಣಿಂ ಭಾರತ್ ಕಿ ಓರೆ’ ಕಾರ್ಯಕ್ರಮವನ್ನ ಮೋದಿ ಉದ್ಘಾಟನೆ ಮಾಡಿದರು
ಇಂದು ಕೋಟಿಗಟ್ಟಲೆ ಭಾರತೀಯರು ಸ್ವರ್ಣಿಂ ಭಾರತಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ರಾಷ್ಟ್ರದ ಪ್ರಗತಿಯಲ್ಲಿ ನಮ್ಮ ಪ್ರಗತಿ ಅಡಗಿದೆ. ರಾಷ್ಟ್ರವು ನಮ್ಮಿಂದ ಅಸ್ತಿತ್ವದಲ್ಲಿದೆ ಮತ್ತು ನಾವು ರಾಷ್ಟ್ರದಿಂದ ಅಸ್ತಿತ್ವದಲ್ಲಿದ್ದೇವೆ. ಈ ಅರಿವು ನವ ಭಾರತದ ನಿರ್ಮಾಣದಲ್ಲಿ ಭಾರತೀಯರ ದೊಡ್ಡ ಶಕ್ತಿಯಾಗುತ್ತಿದೆ ಎಂದು ತಿಳಿಸಿದರು.
ಇಂದು ತಾರತಮ್ಯಕ್ಕೆ ಜಾಗವಿಲ್ಲದ ವ್ಯವಸ್ಥೆ ನಿರ್ಮಾಣವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಚಿಂತನೆ ಮತ್ತು ವಿಧಾನವು ನವೀನ ಮತ್ತು ನಿರ್ಧಾರಗಳು ಪ್ರಗತಿಪರವಾಗಿರುವ ಭಾರತದ ಹೊರಹೊಮ್ಮುವಿಕೆಯನ್ನು ನಾವು ನೋಡುತ್ತಿದ್ದೇವೆ.:
ಅಮೃತ ಮಹೋತ್ಸವದ ಈ ಕಾಲ ಮಲಗಿ ಕನಸು ಕಾಣುವುದಕ್ಕಲ್ಲ, ಎಚ್ಚರದಿಂದ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿದೆ. ಮುಂಬರುವ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ತಪಸ್ಸಿನ ಪರಾಕಾಷ್ಠೆಯಿಂದ ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಇದು ಸುಸಮಯವಾಗಿದೆ ಎಂದು ತಿಳಿಸಿದರು ಪ್ರಧಾನಿ ತಿಳಿಸಿದರು.