ಮೈಸೂರಿನ ವಿದ್ಯಾರ್ಥಿಯನ್ನ ಟ್ವೀಟರ್ ನಲ್ಲಿ ಫಾಲೋಮಾಡಿದ ನರೇಂದ್ರ ಮೋದಿ…
ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನ ಕಾನೂನು ಓದುತ್ತಿರುವ ವಿದ್ಯಾರ್ಥಿಯನ್ನ ಟ್ವಿಟರ್ ಅಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಕುರಿತು ಕಾನೂನು ವಿದ್ಯಾರ್ಥಿ ಪ್ರಜ್ಞಾ ಕಶ್ಯಪ್ ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಮಾಗಹಿತಿ ಹಂಚಿಕೊಂಡಿದ್ದಾರೆ…
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ಒಂದರಿಂದ ಟ್ವೀಟರ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದಾರೆ. ಇದನ್ನ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ದು ಅತ್ಯಂತ ಖುಷಿ ಮತ್ತು ಗೌರವದ ವಿಷಯವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕೇವಲ 2430 ಮಂದಿಯನ್ನ ಫಾಲೋ ಮಾಡುತ್ತಿದ್ದಾರೆ ಅವರ ಹೊಸ ಸೇರ್ಪಡೆಗೆ ಮೈಸೂರಿನ ಹುಡುಗಿ ಪಾತ್ರಳಾಗಿದ್ದಾಳೆ. ಮೈಸೂರು ನಗರದ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ್ ಮಾಡುತ್ತಿರುವ ವಿದ್ಯಾರ್ಥಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಆಗಿದ್ದಾರೆ..
ಪ್ರಜ್ಞಾ ಕಶ್ಯಪ್ ಅವರ ಇಡೀ ಕುಟುಂಬ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ಅಜ್ಜ ವೆಂಕಟೇಶ್ RSS ಕಾರ್ಯಕರ್ತರಾಗಿದ್ದು ಜನಸಂಘ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ತಂದೆ ಎನ್ ವಿ ಫಣೀಶ್ 30 ವರ್ಷಗಳಿಂದ ಆರ್ ಎಸ್ ಎಸ್ ಮತ್ತು ವಿ ಎಚ್ ಪಿ ಯಲ್ಲಿ ಸ್ವಂ ಸೇವಕರಾಗಿದ್ದಾರೆ. ತಾಯಿ ಸುಧಾ ಫಣೀಶ್ ಸಹ ಆರ್ ಎಸ್ ಎಸ್ ನ ರಾಷ್ಟ್ರ ಸೇವಿಕ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.