ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮರಾಜು ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ..
ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಕಂಚಿನ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ.
ಸೀತಾರಾಮ ರಾಜು ಪ್ರತಿಮೆ ಅನಾವರಣದ ನಂತರ ಮಾತನಾಡಿದ ಪ್ರಧಾನಿ. ಆಂಧ್ರದ ಈ ನೆಲದ ಶ್ರೇಷ್ಠ ಬುಡಕಟ್ಟು ಸಂಪ್ರದಾಯಕ್ಕೆ, ಈ ಸಂಪ್ರದಾಯದಿಂದ ಹುಟ್ಟಿದ ಎಲ್ಲಾ ಮಹಾನ್ ಕ್ರಾಂತಿಕಾರಿಗಳು ಮತ್ತು ತ್ಯಾಗಗಳಿಗೆ ನಾನು ತಲೆಬಾಗುತ್ತೇನೆ ಎಂದು ಪ್ರಧಾನಿ ಹೇಳಿದರು. ಸೀತಾರಾಮರಾಜು ಅವರ 125ನೇ ಜಯಂತಿ ಹಾಗೂ ರಂಪ ಕ್ರಾಂತಿಯ 100ನೇ ವರ್ಷಾಚರಣೆಯನ್ನು ವರ್ಷವಿಡೀ ಆಚರಿಸಲಾಗುವುದು ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟವು ಕೇವಲ ಕೆಲವು ವರ್ಷಗಳ, ಕೆಲವು ಪ್ರದೇಶಗಳ ಅಥವಾ ಕೆಲವು ಜನರ ಇತಿಹಾಸವಲ್ಲ ಎಂದು ಪ್ರಧಾನಿ ಹೇಳಿದರು. ಈ ಇತಿಹಾಸವು ಭಾರತದ ಪ್ರತಿಯೊಂದು ಮೂಲೆ ಮೂಲೆಯ ತ್ಯಾಗ, ದೃಢತೆ ಮತ್ತು ತ್ಯಾಗದ ಇತಿಹಾಸವಾಗಿದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ನಮ್ಮ ವೈವಿಧ್ಯತೆ, ಸಾಂಸ್ಕೃತಿಕ ಶಕ್ತಿ ಮತ್ತು ರಾಷ್ಟ್ರವಾಗಿ ನಮ್ಮ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಅವರು ಹೇಳಿದರು.
ಸೀತಾರಾಮ್ ರಾಜು ಜೀವನ ಪಯಣ ನಮಗೆ ಸ್ಫೂರ್ತಿ
ಸೀತಾರಾಮ್ ರಾಜು ಅವರು ಭಾರತದ ಸಾಂಸ್ಕೃತಿಕ ಮತ್ತು ಬುಡಕಟ್ಟು ಅಸ್ಮಿತೆ, ಭಾರತದ ಆದರ್ಶಗಳು ಮತ್ತು ಮೌಲ್ಯಗಳ ಸಂಕೇತ, ಅವರ ಜೀವನ ಪಯಣ ನಮಗೆಲ್ಲರಿಗೂ ಸ್ಪೂರ್ತಿ ಎಂದು ಪ್ರಧಾನಿ ಮೋದಿ ಹೇಳಿದರು.
ಯುವಕರಿಗೆ ಉತ್ತಮ ಅವಕಾಶ
ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ಮುಂದೆ ಬಂದು ಮುನ್ನಡೆಸಿದ್ದರು. ನವ ಭಾರತದ ಕನಸುಗಳನ್ನು ನನಸು ಮಾಡಲು ಇಂದು ಯುವಜನತೆಗೆ ಉತ್ತಮ ಅವಕಾಶವಿದೆ. ದೇಶದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಹೊಸ ಆಲೋಚನೆಗಳು ಮತ್ತು ಹೊಸ ಸಾಧ್ಯತೆಗಳು ಹುಟ್ಟುತ್ತಿವೆ ಎಂದು ಹೇಳಿದರು.