ನವದೆಹಲಿ : ಇದು ನಾಡಿನೆಲ್ಲೆಡೆ ಪವಿತ್ರ ಬಕ್ರೀದ್ ಹಬ್ಬದ (Bakrid Festival) ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಸ್ಲಿಂ (Muslims) ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಶುಭ ತಿಳಿಸಿರುವ ಪ್ರಧಾನಿ ಮೋದಿ, ಸರ್ವರಿಗೂ ಬಕ್ರೀದ್ ಹಬ್ಬದ (ಈದ್-ಉಲ್-ಅಧಾ) ಶುಭಾಶಯಗಳು. ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ, ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸಿ ಬರೆದಿದ್ದಾರೆ.
ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇಂದು ಈದ್ಗಾಗಳಲ್ಲಿ (Eidgah) ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಜ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಬಡವರಿಗೆ ಸಹಾಯ ಮಾಡುತ್ತದೆ.
ಬಕ್ರೀದ್ ಹಬ್ಬದ ದಿನದಂದು ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಿ ಒಂದು ಭಾಗವನ್ನು ಬಡವರಿಗೆ, 2ನೇ ಭಾಗವನ್ನು ಸಂಬಂಧಿಕರಿಗೆ ದಾನ ಮಾಡಿದ ನಂತರ 3ನೇ ಭಾಗವನ್ನು ಮನೆಯವರು ಬಳಸುತ್ತಾರೆ ಎನ್ನುವ ಸಂಪ್ರದಾಯವಿದೆ.
ಅಲ್ಲದೇ, ಬಕ್ರೀದ್ ಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಶುಭಾಶಯ ತಿಳಿಸಿದ್ದಾರೆ.








