ಬೆಂಗಳೂರಿನ ಬಾಲಕನಿಗೆ ಲಭಿಸಿದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ Saaksha Tv
ಬೆಂಗಳೂರು: ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಬೆಂಗಳೂರಿನ ಸೈಯದ್ ಫತೀನ್ ಅಹ್ಮದ್ ಅವರಿಗೆ ಲಭಿಸಿದೆ.
ಪ್ರತಿವರ್ಷದಂತೆ ಈ ಬಾರಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದೆ. ದೇಶದ 29 ಮಕ್ಕಳಿಗೆ ಪುರಸ್ಕಾರ ಲಭಿಸಿದ್ದು, ಸಂಗೀತ-ಮನರಂಜನೆಯಲ್ಲಿ ಸೈಯದ್ ಫತೀನ್ ಅಹ್ಮದ್ ಆಯ್ಕೆಯಾಗಿದ್ದಾರೆ. ಪಿಯಾನೋ ನುಡಿಸೋದರಲ್ಲಿ 16 ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಫತೀನ್ ಪಡೆದಿದ್ದಾರೆ. ಇವರು ಬೆಂಗಳೂರಿನ ಜಯನಗರದ ನಿವಾಸಿ ಡಾ. ಅಸ್ಮಾ ಅವರ ಪುತ್ರನಾಗಿದ್ದಾರೆ.
ಈ ಪ್ರಶಸ್ತಿಯನ್ನು 5 ವರ್ಷಕ್ಕಿಂತ ಮೇಲ್ಪಟ್ಟ 18 ವರ್ಷ ಮೀರಿರದ ಬಾಲಕರು ಮತ್ತು ಪ್ರೌಢಾವಸ್ಥೆಯಲ್ಲಿರುವವರ ಅಸಾಧಾರಣ ಸಾಧನೆ ಗುರುತಿಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗುತ್ತದೆ. ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ, ಸಂಸ್ಕೃತಿ, ಶೌರ್ಯ ಮತ್ತು ನಾವೀನ್ಯತೆ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ.
ಇನ್ನೂ ಪ್ರಶಸ್ತಿ ಪಡೆದವರ ಮಕ್ಕಳ ಜೊತೆ ಇಂದು ಮಧ್ಯಾಹ್ನ ಪ್ರಧಾನಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಮಕ್ಕಳು ತಮ್ಮ ಪೋಷಕರು ಮತ್ತು ಆಯಾ ಜಿಲ್ಲೆಯ ಜಿಲ್ಲಾಕಾರಿಗಳ ಜೊತೆ ಜಿಲ್ಲಾಕೇಂದ್ರ ಕಚೇರಿಯಿಂದ ಸಂವಾದದಲ್ಲಿ ಭಾಗವಹಿಸಬಹುದಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ನರೇಂದ್ರ ಮೋದಿ ಅವರು 2021-2022ರ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಡಿಜಿಟಲ್ ಪ್ರಮಾಣಪತ್ರ ವಿತರಿಸಲಿದ್ದಾರೆ. ಪ್ರಶಸ್ತಿ ಪಡೆದವರು ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ.