Prithvi Shah : ರಣಜಿಯಲ್ಲಿ ಮೊದಲ ಟ್ರಿಪಲ್ ಶತಕ ಗಳಿಸಿದ ಪೃಥ್ವಿ ಶಾ – 379 ರನ್ ಬಾರಿಸಿ ದಾಖಲೆ…
ಭಾರತ ಕ್ರಿಕೆಟ್ ತಂಡದಿಂದ ಅವಕಾಶ ವಂಚಿತರಾಗಿರುವ ಪೃಥ್ವಿ ಶಾ ರಣಜಿ ಟೋಫ್ರಿಯಲ್ಲಿ ಮುಂಬೈ ಪರ ತಮ್ಮ ವೃತ್ತಿ ಜೀವನದ ಮೊದಲ ಟ್ರಿಪಲ್ ಶತಕವನ್ನ ದಾಖಲಿಸಿದದಾರೆ. 383 ಎಸೆತಗಳಲ್ಲಿ 379 ರನ್ ದಾಖಲಿಸಿದ್ದಾರೆ. ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಗರಿಷ್ಠ ಇನ್ನಿಂಗ್ಸ್ ಆಗಿದೆ. ಇವರಿಗಿಂತ ಮೊದಲು, ಬೀಬಿ ನಿಂಬಾಳ್ಕರ್ ಅವರು 1948-49 ಋತುವಿನಲ್ಲಿ ಮಹಾರಾಷ್ಟ್ರ ಪರ 443 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.
ಪೃಥ್ವಿ ಶಾ ಗಳಿಸಿದ ಸ್ಕೋರ್ ರಣಜಿ ಟ್ರೋಫಿ ಇತಿಹಾಸದಲ್ಲಿ ಆರಂಭಿಕ ಆಟಗಾರ ಗಳಿಸಿರುವ ಗರಿಷ್ಠ ಸ್ಕೋರ್ ಆಗಿದೆ. ಈ ಮೂಲಕ ತ್ರಿಪುರಾದ ಸಮಿತ್ ಗೊಹೆಲ್ ಅವರ ದಾಖಲೆಯನ್ನ ಮುರಿದ್ದಾರೆ. ಗೊಹೆಲ್ 2016ರಲ್ಲಿ ಅಜೇಯ 359 ರನ್‌ಗಳ ಇನಿಂಗ್ಸ್ ಆಡಿದ್ದರು.
ಗುವಾಹಟಿಯಲ್ಲಿ ಮುಂಬೈ ಮತ್ತು ಅಸ್ಸಾಂ ನಡುವೆ ರಣಜಿ ಟ್ರೋಫಿ 5ನೇ ಸುತ್ತಿನ ಪಂದ್ಯ ನಡೆಯುತ್ತಿದೆ. ಮಂಗಳವಾರ ಮೊದಲು ಬ್ಯಾಟ್ ಮಾಡಿದ ಮುಂಬೈ 2 ವಿಕೆಟ್‌ಗೆ 397 ರನ್ ಗಳಿಸಿತು. ಆಗ ಪೃಥ್ವಿ ಅಜೇಯ 240 ರನ್ ಗಳಿಸಿದ್ದರು. ಬುಧವಾರದ ಮೊದಲ ಸೆಷನ್‌ನಲ್ಲಿ ಅವರು 326 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. 379 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 49 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು.
ಇದು ರಣಜಿ ಟ್ರೋಫಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಕೂಡ ಆಗಿದೆ. ಇದಕ್ಕೂ ಮುನ್ನ ಅವರು 2019-20ರ ರಣಜಿ ಋತುವಿನಲ್ಲಿ ಬರೋಡಾ ವಿರುದ್ಧ 202 ರನ್ ಗಳಿಸಿದ್ದರು. ಮುಂಬೈ ಎರಡನೇ ಅವಧಿಯವರೆಗೆ 127 ಓವರ್‌ಗಳಲ್ಲಿ 3 ವಿಕೆಟ್‌ಗೆ 608 ರನ್ ಗಳಿಸಿದೆ. ಅವರ ನಾಯಕ ಅಜಿಂಕ್ಯ ರಹಾನೆ ಶತಕ ಬಾರಿಸಿದ ನಂತರ ಸರ್ಫರಾಜ್ ಖಾನ್ ಅವರೊಂದಿಗೆ ಆಡುತ್ತಿದ್ದಾರೆ.
Prithvi Shah scored the first triple century in Ranji – a record of 379 runs…