ವಿಜಯ್ ಹಜಾರೆ ಟ್ರೋಫಿಯಲ್ಲಿ ಪ್ರಜ್ವಲಿಸಿದ ಪೃಥ್ವಿ : ಅಜೇಯ ದ್ವಿಶತಕ

1 min read
PRITHVI SHAW

ವಿಜಯ್ ಹಜಾರೆ ಟ್ರೋಫಿಯಲ್ಲಿ ಪ್ರಜ್ವಲಿಸಿದ ಪೃಥ್ವಿ : ಅಜೇಯ ದ್ವಿಶತಕ

ಮುಂಬೈ : ಕೆಟ್ಟ ಪ್ರದರ್ಶನದಿಂದ ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಸಿಡಿಲಮರಿ ಪೃಥ್ವಿ ಶಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಡಿಲಬ್ಬರದ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಪುದುಚೇರಿ ವಿರುದ್ಧ ಪೃಥ್ವಿ ಶಾ ಅಜೇಯ ದ್ವಿಶತಕ (227*) ಬಾರಿಸಿ ದಾಖಲೆ ಬರೆದಿದ್ದಾರೆ.

ಪಂದ್ಯ 45ನೇ ಓವರ್‍ನಲ್ಲಿ ಸಿಂಗಲ್ ಮೂಲಕ ಪೃಥ್ವಿ ಶಾ ದ್ವಿಶತಕ ಪೂರ್ಣಗೊಳಿಸಿದ್ರು. ಲಿಸ್ಟ್ ಎ ಕ್ರಿಕೆಟ್ ನಲ್ಲಿ ಪೃಥ್ವಿ ಶಾ ಈವರೆಗೂ 6 ಶತಕಗಳನ್ನ ಸಿಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಸೈಲೆಂಟ್ ಕಿಲ್ಲರ್ ಸೂರ್ಯಕುಮಾರ್ ಯಾದವ್ ಶತಕ (133) ಬಾರಿಸಿದ್ದಾರೆ. ಇದರೊಂದಿಗೆ ಮುಂಬೈ ತಂಡ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 457 ರನ್ ಗಲ ದಾಖಲೆಯ ಮೊತ್ತ ದಾಖಲಿಸಿದೆ.

PRITHVI SHAW

ಲಿಸ್ಟ್ ಎ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿರುವ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು :

ಲಿಸ್ಟ್ ಎ ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿದ 8ನೇ ಭಾರತೀಯ ಬ್ಯಾಟ್ಸ್‍ಮನ್ ಪೃಥ್ವಿ ಶಾ.

ಈ ಮುನ್ನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಕರಣ್ ಕೌಶಲ್ ಈ ಸಾಧನೆ ಮಾಡಿದ್ದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd