ಬಿಎಮ್ ಡಬ್ಲ್ಯು ಕಾರಿನ ಒಡೆಯನಾದ ಪೃಥ್ವಿ ಶಾ…!
ಡೇರಿಂಗ್ ಬ್ಯಾಟ್ಸ್ ಮೆನ್ ಪೃಥ್ವಿ ಶಾ ಗೆ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದ್ರೆ ಐಪಿಎಲ್ ನಲ್ಲಿ ಪೃಥ್ವಿ ಶಾ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿರುವ ಪೃಥ್ವಿ ಶಾ 15 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ಸಹಾಯದಿಂದ 479 ರನ್ ಸಿಡಿಸಿದ್ದಾರೆ. ಅದು ಕೂಡ 159 ಸ್ಟ್ರೈಕ್ ರೇಟ್‍ನಲ್ಲಿ ಅನ್ನೋದು ವಿಶೇಷ.
ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆಯುವ ಪೃಥ್ವಿ ಶಾ ಈಗ ಬಿಎಮ್ ಡಬ್ಲ್ಯು 630 ಐ.ಎಮ್. ಸ್ಪೋಟ್ರ್ಸ್ ಕಾರನ್ನು ಖರೀದಿ ಮಾಡಿದ್ದಾರೆ.
ತನ್ನ ಇನ್ ಸ್ಟ್ರಾ ಗ್ರಾಮ್ ಖಾತೆಯಲ್ಲಿ ಹೊಸ ಬಿಎಮ್ ಡಬ್ಲ್ಯು ಕಾರಿನ ಜೊತೆ ತನ್ನ ತಂದೆ ಪಂಕಜ್ ಶಾ ಜೊತೆಗಿರುವ ಫೋಟೋವನ್ನು ಪೃಥ್ವಿ ಶಾ ಹಂಚಿಕೊಂಡಿದ್ದಾರೆ. ಈ ಕಾರಿನ ಬೆಲೆ 68 ಲಕ್ಷ ರೂಪಾಯಿ.
ಅಂದ ಹಾಗೇ ಪೃಥ್ವಿ ಶಾ ಸಾಕಷ್ಟು ಕಷ್ಟಪಟ್ಟು ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರನಾಗಿ ರೂಪುಗೊಂಡಿದ್ದಾರೆ. ಎಳೆವೆಯಲ್ಲಿ ಅಮ್ಮನನ್ನು ಕಳೆದುಕೊಂಡಿದ್ದ ಪೃಥ್ವಿ ಶಾ ಅವರಿಗೆ ತಂದೆ ಪಂಕಜ್ ಶಾ ಅವರೇ ಎಲ್ಲವೂ ಆಗಿದ್ದರು.
ಮಗನನ್ನು ಕ್ರಿಕೆಟಿಗನಾಗಿ ರೂಪುಗೊಳಿಸಲು ಪಂಕಜ್ ಶಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗನ ಪ್ರತಿ ಹೆಜ್ಜೆಯ ಹಿಂದೆ ಪಂಕಜ್ ಶಾ ಅವರ ಬೆವರಿನ ಹನಿಗಳಿವೆ. ಹೀಗಾಗಿಯೇ ಪೃಥ್ವಿ ಶಾ ಇವತ್ತು ಕ್ರಿಕೆಟಿಗನಾಗಿರೋದು.
19 ವಯೋಮಿತಿ ವಿಶ್ವಕಪ್ ವಿಜೇತ ತಂಡದ ನಾಯಕನಾಗಿರುವ ಪೃಥ್ವಿ ಶಾ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಸಾಕಷ್ಟು ಭರವಸೆ ಮೂಡಿಸಿದ್ದರು. ಆದ್ರೆ ಉದ್ದೀಪನ ದ್ರವ್ಯ ಸೇವನೆ ಆರೋಪದಿಂದಾಗಿ ಕೆಲವು ತಿಂಗಳು ಟೀಮ್ ಇಂಡಿಯಾದಿಂದ ದೂರ ಉಳಿದಿದ್ದರು. ಆದಾದ ನಂತರ ಗಾಯದ ಸಮಸ್ಯೆ, ಕೈಕೊಟ್ಟ ಫಾರ್ಮ್ ನಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಕಳೆದ ವಿಜಯ ಹಜಾರೆ ಟ್ರೋಫಿಯಲ್ಲಿ ರನ್ ಮಳೆಯನ್ನೇ ಸುರಿಸಿದ್ದ ಪೃಥ್ವಿ ಶಾ ಟೀಮ್ ಇಂಡಿಯಾದ ಕದ ತಟ್ಟಿದ್ರೂ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಇದೀಗ ಐಪಿಎಲ್ ನಂತರ ಹೊಸ ಕಾರು ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶಿ ಕ್ರಿಕೆಟ್ ನತ್ತ ಚಿತ್ತವನ್ನಿಟ್ಟಿರುವ ಪೃಥ್ವಿ ಶಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕೂಡ ಖಚಿತವಾಗಿದೆ.