ಸೂರ್ಯಕುಮಾರ್ ಯಾದವ್ ಬರ್ತ್ ಡೇ : ಪೃಥ್ವಿ ಶಾ ತಮಾಷೆ

1 min read
Prithvi-shaw saaksha tv

ಸೂರ್ಯಕುಮಾರ್ ಯಾದವ್ ಬರ್ತ್ ಡೇ : ಪೃಥ್ವಿ ಶಾ ತಮಾಷೆ

ಮಂಗಳವಾರ ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಬರ್ತ್ ಡೇ ಅಂಗವಾಗಿ ಅವರ ಸಹ ಆಟಗಾರರು ಸೋಶಿಯಲ್ ಮೀಡಿಯಾ ಮೂಲಕ ಶುಭಕೋರಿದ್ದಾರೆ.

ಅದರಂತೆ ಕ್ರಿಕೆಟಿಗ ಪೃಥ್ವಿ ಶಾ ಕೂಡ ಬರ್ತ್ ಡೇ ವಿಶ್ ಮಾಡಿದ್ದು, ಅವರು ಹಂಚಿಕೊಂಡಿರುವ ಯಾದವ್ ಅವರ ಫೋಟೋ ಭಾರಿ ತಮಾಷೆಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಪೃಥ್ವಿ ಶಾ, ಸೂರ್ಯ ಕುಮಾರ್ ಯಾದವ್ ಅವರ ಫೋಟೋವನ್ನು ಸ್ಕೂಲ್ ಗೆ ಹೋಗುವ ಹುಡುಗಿಯಂತೆ ಎಡಿಟ್ ಮಾಡಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

Prithvi-shaw saaksha tv

ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಸೂರ್ಯ ಕುಮಾರ್ ಯಾದವ್ ಸೆಪ್ಟೆಂಬರ್ 14, 1990 ರಂದು ಮುಂಬೈನಲ್ಲಿ ಜನಿಸಿದರು.

ಬಲಗೈ ಬ್ಯಾಟ್ಸ್‍ಮನ್ ಆಗಿರುವ ಅವರು 2010-11ರಲ್ಲಿ ದೆಹಲಿ ವಿರುದ್ಧದ ರಣಜಿ ಪಂದ್ಯದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸೂರ್ಯಕುಮಾರ್ ಯಾದವ್, 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ 20 ಪಂದ್ಯದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇದೀಗ ಟಿ 20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನಪಡೆದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd