ADVERTISEMENT
Wednesday, September 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

PSI ಪರೀಕ್ಷೆ ಅಕ್ರಮ: ಗೃಹ ಸಚಿವರನ್ನು ವಜಾಗೆ ಪೃಥ್ವಿರೆಡ್ಡಿ ಮನವಿ

Mahesh M Dhandu by Mahesh M Dhandu
April 26, 2022
in Newsbeat, Politics, ರಾಜಕೀಯ
Prithvireddy appeals to dismiss home minister saaksha tv
Share on FacebookShare on TwitterShare on WhatsappShare on Telegram

ಪಿಎಸ್‌ಐ ಪರೀಕ್ಷೆ ಅಕ್ರಮ: ಗೃಹ ಸಚಿವರನ್ನು ವಜಾಗೆ ಪೃಥ್ವಿರೆಡ್ಡಿ ಮನವಿ

ಬೆಂಗಳೂರು : ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮನವಿ ಮಾಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರರವರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಆಗ್ರಹಿಸಿದರು. ನಿಯೋಗದಲ್ಲಿ ಪಕ್ಷದ ಹಿರಿಯ ಮುಖಂಡ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ಪಕ್ಷದ ಅನೇಕ ಮುಖಂಡರುಗಳು ಇದ್ದರು.

Related posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

September 9, 2026
LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

September 9, 2026

ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ರವರನ್ನು ಮಂಗಳವಾರ ಭೇಟಿ ಮಾಡಿದ ಪೃಥ್ವಿ ರೆಡ್ಡಿಯವರು ಮೂರು ಆಗ್ರಹಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರು. ಇವುಗಳನ್ನು ಶೀಘ್ರ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದರು.

ಮೊದಲನೆಯದಾಗಿ, ರಾಜ್ಯದ 52,000 ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆ. ಈಗ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳನ್ನು ಕಾಯಿಸದೇ ಶೀಘ್ರವೇ ಮರುಪರೀಕ್ಷೆ ನಡೆಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ನೂತನ ಪ್ರಾಧಿಕಾರ ರಚಿಸಿ ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ ಮನವಿ ಮಾಡಿದರು.

Prithvireddy appeals to dismiss home minister saaksha tv

ಎರಡನೆಯದಾಗಿ, ಪಿಎಸ್‌ಐ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ರಾಜ್ಯ ಸರ್ಕಾರವು ತನ್ನ ಪ್ರಭಾವ ಬಳಸಿ ತನಿಖೆಯು ವಿಳಂಬವಾಗುವಂತೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ ಮನವಿ ಮಾಡಿದರು.

ಮೂರನೇಯದಾಗಿ, ರಾಜ್ಯ ಸಚಿವ ಸಂಪುಟದಲ್ಲಿ ಗೃಹ ಇಲಾಖೆಯು ಅತ್ಯಂತ ಸೂಕ್ಷ್ಮವಾದ ಇಲಾಖೆಯಾಗಿದೆ. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಸಾಮರ್ಥ್ಯ ಹಾಗೂ ಅನುಭವದ ಕೊರತೆಯಿರುವುದು ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಸಾಬೀತಾಗುತ್ತಿದೆ. ಆದ್ದರಿಂದ ಕೂಡಲೇ ಅವರನ್ನು ವಜಾ ಮಾಡಿ ಸಮರ್ಥರನ್ನು ಗೃಹ ಸಚಿವ ಸ್ಥಾನಕ್ಕೆ ನೇಮಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಭಾಸ್ಕರ್ ರಾವ್ ಮನವಿ ಮಾಡಿದರು.

ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ನಾಗಣ್ಣ ಗೌಡ, ಚನ್ನಪ್ಪಗೌಡ ನೆಲ್ಲೂರು ಹಾಗೂ ಜಗದೀಶ್ ಚಂದ್ರರವರು ಭಾಗವಹಿಸಿದ್ದರು. Prithvireddy appeals to dismiss home minister

Tags: #Saaksha TVappkarnatakaPrithvireddy
ShareTweetSendShare
Join us on:

Related Posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

by Shwetha
September 9, 2026
0

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

by Shwetha
September 9, 2026
0

ಗೃಹಬಳಕೆಯ LPG ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ಗೃಹ ಬಳಕೆಯ...

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

by Shwetha
September 9, 2026
0

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2025ರಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಬಡ್ತಿಯನ್ನು ರಾಜ್ಯ ಸರ್ಕಾರ ಇದೀಗ ಮರುಸ್ಥಾಪಿಸಿದೆ....

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

by Shwetha
September 9, 2026
0

ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ...

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

by Shwetha
September 9, 2026
0

ಧಾರವಾಡ: ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ಲವ್ ಜಿಹಾದ್ ಆರೋಪ ಮತ್ತು ತೀವ್ರ ವಿರೋಧ ಎದುರಿಸುತ್ತಿದ್ದ ಉತ್ತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram