ಚಾಮರಾಜನಗರ : ಉಸಿರಾಟ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ಬಂದ ಮಂಡ್ಯ ಜಿಲ್ಲೆಯ ನಿವಾಸಿಗೆ ಕೊರಾನಾ ಸೋಂಕು ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯನ್ನು ರಾತ್ರೋ ರಾತ್ರಿ ಸೀಲ್ ಡೌನ್ ಮಾಡಲಾಗಿದೆ.
ಮಂಡ್ಯದ ನಿವಾಸಿಯೊಬ್ಬರು ಚಾಮರಾಜನಗರ ದ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಂಡ್ಯ ನಿವಾಸಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕೊವೀಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಕೊರಾನಾ ಸೊಂಕು ಶಂಕಿತ ವ್ಯಕ್ತಿಗೆ ಪರೀಕ್ಷೆ ನಡೆಸಿದ ಹಿನ್ನಲೆ ಸ್ವಯಂಪ್ರೇರಣೆಯಿಂದ ಖಾಸಗಿ ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿನ ಒಳರೋಗಿಗಳು ಮತ್ತೊಂದು ಅದೇ ಖಾಸಗಿ ಆಸ್ಪತ್ರೆಗೆ ಶಿಷ್ಟ್ ಮಾಡಲಾಗಿದೆ.
ಶಂಕಿತ ವ್ಯಕ್ತಿಗೆ ಪರೀಕ್ಷಿಸಿದ ವೈದ್ಯ ಸ್ವಯಂ ಹೋಂ ಕ್ವಾರೈಂಟೇನ್ ಗೆ ಇರುವಂತೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಲಿ ಸೂಚಿಸಿದೆ. ಆಸ್ಪತ್ರೆ ಸ್ಯಾನಟೈಸಿಂಗ್ ಗೆ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಲಿ ಮುಂದಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊರಾನಾ ಶಂಕಿತ ಮಂಡ್ಯ ನಿವಾಸಿ ಕೊವೀಡ್ ಆಸ್ಪತ್ರೆಗೆ ತೆರಳಿದ್ದಾನೆ. ಪ್ರಯೋಗಾಲಯದ ವರದಿ ಬರುವ ತನಕ ಆತನನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಲಾಗಿದೆ.