ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಪ್ರಸಕ್ತ ವರ್ಷ ಶೇ.70ರಷ್ಟು ಮಾತ್ರ ಭೋದನಾ ಶುಲ್ಕವನ್ನು ಮಾತ್ರ ಮಕ್ಕಳ ಪೋಷಕರಿಂದ ಪಡೆಯಲು ಅನುಮತಿ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್ 25ರಿಂದಲೇ ಲಾಕ್‍ಡೌನ್ ಮಾಡಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‍ನಿಂದ ಡಿಸೆಂಬರ್ 31ರವರೆಗೆ ಯಾವುದೇ ಶಾಲೆಗಳು ಓಪನ್ ಆಗಿರಲಿಲ್ಲ.
ಕೊರೊನಾ ಮತ್ತು ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಶುಲ್ಕವನ್ನು ಕಡಿತ ಮಾಡುವಂತೆ ಪೋಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಪೋಷಕರ ಮನವಿ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಭಿಪ್ರಾಯ ಪಡೆದು ಭೋದನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. 2020-21ನೇ ಸಾಲಿನ ಭೋದನಾ ಶುಲ್ಕದಲ್ಲಿ ಶೇ.70ರಷ್ಟು ಮಾತ್ರ ಪೋಷಕರಿಂದ ಪಡೆಯಬೇಕು, ಉಳಿದಂತೆ ಅಭಿವೃದ್ಧಿ ಶುಲ್ಕ, ಐಶ್ಛಿಕ ಶುಲ್ಕ, ಟ್ರಸ್ಟ್ ವಂತಿಗೆ, ಡೊನೇಶನ್ ಸೇರಿದಂತೆ ಯಾವುದೇ ಶುಲ್ಕಗಳನ್ನು ಪೋಷಕರಿಂದ ಸಂಗ್ರಹಿಸದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್.ಎಸ್ ಶಿವಕುಮಾರ್ ಸರ್ಕಾರಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ಏನಿದೆ..
* ಈ ಆದೇಶ ಸಿಬಿಎಸ್‍ಇ, ಐಸಿಎಸ್‍ಇ, ಕರ್ನಾಟಕ ಸೇರಿದಂತೆ ಎಲ್ಲಾ ಪಠ್ಯಕ್ರಮದ ಅನುದಾನ ರಹಿತ ಖಾಗಿ ಶಾಲೆಗಳಿಗೂ ಅನ್ವಯವಾಗಲಿದೆ.
* ಈಗಾಗಲೇ ಪೋಷಕರು ಪೂರ್ಣ ಶುಲ್ಕ ಪಾವತಿಸಿದ್ದಲ್ಲಿ ಹೆಚ್ಚುವರಿ ಶುಲ್ಕವನ್ನು ಪೋಷಕರಿಗೆ ವಾಪಸ್ ನೀಡಬೇಕು ಅಥವಾ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು.
* 2020-21ನೇ ಶೈಕ್ಷಣಿಕ ವರ್ಷದಲ್ಲಿ ನಿಗಧಿಪಡಿಸಿದ ಶುಲ್ಕಕ್ಕಿಂತ ಕಡಿಮೆ ಪಡೆಯಲು ಶಾಲಾ ಆಡಳಿತ ಮಂಡಳಿ ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆ.
* ಪೋಷಕರಿಗೆ ಕನಿಷ್ಠ ಎರಡು ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿ ಕೊಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಯಾವ ಶುಲ್ಕ ವಸೂಲಿ ಮಾಡುವಂತಿಲ್ಲ..?
* ಅಭಿವೃದ್ಧಿ ಶುಲ್ಕ,
* ಐಶ್ಛಿಕ ಶುಲ್ಕ,
* ಟ್ರಸ್ಟ್, ಸೊಸೈಟಿ ವಂತಿಗೆ
* ಡೊನೇಶನ್
* ಕ್ರೀಡಾ ಶುಲ್ಕ
* ಲೈಬ್ರರಿ ಶುಲ್ಕ
* ಲ್ಯಾಬ್ ಶುಲ್ಕ
ನಿನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಲ್ಕ ಕಡಿತದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಸುರೇಶ್ ಕುಮಾರ್ ಹೇಳಿಕೆ ನೀಡಿದ 24 ಗಂಟೆಗಳಲ್ಲಿ ಅಧಿಕೃತ ಆದೇಶ ಹೊರಬಿದ್ದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel