ನಿಕ್ ಪತ್ನಿ ಎಂದು ವರದಿ ಮಾಡಿದ ಪತ್ರಿಕೆ ವಿರುದ್ಧ ಸಿಡಿದ ಪಿಗ್ಗಿ..!
ಪ್ರಿಯಾಂಕಾ ಚೋಪ್ರಾ.. ಈ ಹೆಸರು ಬಾಲಿವುಡ್ ಅಂಗಳ ಹಾಗೂ ಇಡೀ ಭಾರತದಲ್ಲಿ ಚಿರಪರಿಚಿತ.. ಅಷ್ಟೇ ಅಲ್ಲ ಹಾಲಿವುಡ್ ನಲ್ಲೂ ಪ್ರಿಯಾಂಕಾ ಹೆಸರು ಎಲ್ರಿಗೂ ಗೊತ್ತಿದೆ.. ಸದ್ಯ ಪ್ರಿಯಾಂಕಾ ಬಾಲಿವುಡ್ ನಲ್ಲಿ ಸಿನಿಮಾ ಮಾಡೋದು ಕಡಿಮೆಯಾಗಿದ್ರು ಹಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.. ಅಮೆರಿಕಾದ ಸ್ಟಾರ್ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಮದುವೆಯಾದ ನಂತರ ಅಲ್ಲಿಯೇ ಸೆಟಲ್ ಆಗಿದ್ದಾರೆ ಪಿಗ್ಗಿ.. ಪ್ರಿಯಾಂಕಾ ಚೋಪ್ರಾ ಅತ್ಯದ್ಭುತ ನಟನೆಯಿಂದ ತಮ್ಮ ಹೆಸರನ್ನ ಈಗ ಒಂದು ಬ್ರ್ಯಾಂಡ್ ಆಗುವಂತೆ ಮಾಡಿದ್ದಾರೆ.. ಪ್ರಿಯಾಂಕಾ ಅಂದ್ರೆ ಎಲ್ಲರಿಗೂ ಗೊತ್ತು..
ಸಿನಿಮಾಗಳು ಅಷ್ಟೇ ಅಲ್ಲದೇ ನಿರ್ಮಾಪಕಿಯಾಗಿ, ಲೇಖಕಿಯಾಗಿ, ಉದ್ಯಮಿಯಾಗಿ, ಯುನಿಸೆಫ್ ನ ರಾಯಬಾರಿಯಾಗಿ ಪ್ರಿಯಾಂಕಾ ಚೋಪ್ರಾ ಗುರುತಿಸಿಕೊಂಡಿದ್ದಾರೆ. ಆದ್ರೆ ಈ ನಡುವೆ ಅಮೆರಿಕದ ಪತ್ರಿಕೆಯೊಂದು ‘ದಿ ವೈಫ್ ಆಫ್ ನಿಕ್ ಜೋನಸ್’ ಎಂದು ತನ್ನ ವರದಿಯಲ್ಲಿ ಬರೆದಿದೆ. ಈ ವರದಿಯ ವಿರುದ್ಧ ಪ್ರಿಯಾಂಕಾ ಕೆಂಡಾಮಂಡಲವಾಗಿದ್ದಾರೆ.
ಪುಷ್ಪ ಸಿನಿಮಾ ವಿರುದ್ಧ ರಚ್ಚು ಪರೋಕ್ಷ ಕಿಡಿ – ಕನ್ನಡ ಸಿನಿಮಾ ನೋಡಿ ಎಂದ ಡಿಂಪಲ್ ಕ್ವೀನ್..!
ಹೌದು ನಿಕ್ ಜೋನಸ್ ಪತ್ನಿ ಎಂದಿದ್ದಕ್ಕೆ ಪ್ರಿಯಾಂಕಾ ಸಿಡಿದಿದ್ದಾರೆ.. ಆದ್ರೆ ಪಿಗ್ಗಿ ಸಿಟ್ಟಾಗಿರೋದ್ರಲ್ಲಿ ಅರ್ಥ ಇದೆ.. ಪ್ರಿಯಾಂಕಾ ಸ್ಟ್ರಾಂಗ್ ಮಹಿಳೆ.. ಇಂಡಿಪೆಂಡೆಂಟ್ ಕೂಡ.. ಅವರದ್ದೇ ಆದ ಸಾಧನೆ, ಅವರದ್ದೇ ಆದ ಒಂದು ಐಡೆಂಟಿಟಿ ಇದೆ.. ತಮ್ಮದೇ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾರನ್ನ ಮೊದಲು ಅವರ ಕೆಲಸಗಳಿಂದ ಗುರುತಿಸಬೇಕು.. ಆನಂತರ ಅವರು ನಿಕ್ ಜಾನಸ್ ಪತ್ನಿ ಅಂತ ಹೇಳಬಹುದಿತ್ತು. ಆದ್ರೆ ಅವರ ಸಾಧನೆಯನ್ನೇ ಹೇಳದೇ , ಅವರನ್ನ ಕೇವಲ ಓರ್ವ ಸ್ಟಾರ್ ಸಿಂಗರ್ ನ ಪತ್ನಿ ಎಂಬಂತೆ ಬಿಂಬಿಸುವುದು ಎಷ್ಟು ಸರಿ ಅನ್ನೋದು ಪ್ರಿಯಾಂಕಾ ಅವರ ವಾದ..
ಪ್ರಿಯಾಂಕಾ ಅಮೆರಿಕದ ಪ್ರತಿಷ್ಟಿತ ಪತ್ರಿಕೆ ಡೈಲಿ ಮೇಲ್ ಪ್ರಕಟಿಸಿದ ವರದಿಯೊಂದನ್ನು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.. ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾ ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸೌಂಡ್ ಮಾಡ್ತಿದೆ.. ಹೀಗಿದ್ರೂ ಪ್ರಿಯಾಂಕಾ ಚೋಪ್ರಾ ಹೆಸರನ್ನು ಬಳಸುವ ಬದಲು ನಿಕ್ ಜೋನಸ್ ಪತ್ನಿ ಎಂದು ವರದಿಯಲ್ಲಿ ಬರೆದಿದ್ದಕ್ಕೆ ಪ್ರಿಯಾಂಕಾ ತನಗಾದ ಅವಮಾನವೆಂದು ಭಾವಿಸಿದ್ದು ಪತ್ರಿಕೆಯ ವರದಿ ಬಗ್ಗೆ ಸಿಡಿದೆದ್ದಿದ್ದಾರೆ..
ನಾನು ಸಾರ್ವಕಾಲಿಕ ಸಿನಿಮಾಗಳಲ್ಲಿ ಒಂದಾದ ಫ್ರಾಂಚೈಸಿಯನ್ನು ಪ್ರಚಾರ ಮಾಡುತ್ತಿದ್ದೇನೆ. ಅದರೂ ನನ್ನನ್ನು ನಿಕ್ ಜೋನಸ್ ಪತ್ನಿಯೆಂದು ಕರೆಯುತ್ತಿದ್ದಾರೆ. ಮಹಿಳೆಯರ ವಿರುದ್ಧ ಇಂತಹ ಘಟನೆ ಹೇಗೆ ನಡೆಯಲು ಸಾಧ್ಯ ವಿವರಿಸಿ..?? ನಾನು ನನ್ನ ಜೀವನ ಚರಿತ್ರೆಯಲ್ಲಿ IMDb ಲಿಂಕ್ ಅನ್ನು ಸೇರಿಸಿಕೊಳ್ಳಬೇಕಾ? ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಪಿಗ್ಗಿ ಅಭಿಮಾನಿಗಳು ಕೂಡ ಆಕ್ರೋಶಗೊಂಡಿದ್ದಾರೆ..