ಪುಷ್ಪ ಸಿನಿಮಾ ವಿರುದ್ಧ ರಚ್ಚು ಪರೋಕ್ಷ ಕಿಡಿ – ಕನ್ನಡ ಸಿನಿಮಾ ನೋಡಿ ಎಂದ ಡಿಂಪಲ್ ಕ್ವೀನ್..!
ರಾಜ್ಯದಲ್ಲಿ ಒಂದೆಡೆ ಕನ್ನಡದ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ, ರಿಲೀಸ್ ಗೆ ರೆಡಿಯಾಗಿವೆ.. ಈ ನಡುವೆ ಬೇರೆ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗ್ತಿವೆ.. ಬೇರೆ ಭಾಷೆಯ ಬಿಗ್ ಬಜೆಟ್ ಸಿನಿಮಾಗಳ ಹಾವಳಿಯಿಂದ ನಮ್ಮ ಕನ್ನಡದ ಸಿನಿಮಾಗಳಿಗೆ ಕೊಂಚ ಪೆಟ್ಟು ಬೀಳ್ತಿದೆ.. ಉದಾಹರಣೆಗೆ ಇತ್ತೀಚೆಗೆ ಪುಷ್ಪ ಸಿನಿಮಾ ರಿಲೀಸ್ ಆಗಿದೆ.. ಮುಂದೆ RRR ಸಿನಿಮಾ ಕೂಡ ರಿಲೀಸ್ ಆಗಲಿದೆ.. ಆದ್ರೆ ಪುಷ್ಪ ನಾಮಕಾವಸ್ಥೆಗೆ ಕನ್ನಡದಲ್ಲಿ ಒಂದೇ ಒಂದು ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಮಾಡಿ ಉಳಿದಂತೆ ಎಲ್ಲೆಡೆ ತೆಲುಗು ವರ್ಷನ್ ಬಿಡಗುಗಡೆ ಮಾಡಿರೋದು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ..
ಈ ನಡುವೆ ಈ ತಿಂಗಳಾಂತ್ಯಕ್ಕೆ ರಚಿತಾ ರಾಮ್ ಹಾಗೂ ಅಜಯ್ ರಾವ್ ನಟನೆಯ ಕನ್ನಡದ “ ಲವ್ ಯೂ ರಚ್ಚು ಸಿನಿಮಾ ರಿಲೀಸ್ ಆಗ್ತಿದೆ”.. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಭಾರೀ ಸೌಂಡ್ ಮಾಡ್ತಿದೆ.. ಈ ನಡುವೆ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಚ್ಚು ಪರೋಕ್ಷವಾಗಿ ಪುಷ್ಪ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ..
‘ಕನ್ನಡಿಗರಾದ ನಾವು ವಿಶಾಲ ಹೃದಯದವರು ಹಾಗಾಗಿ ಎಲ್ಲ ಭಾಷೆಯ ಸಿನಿಮಾಗಳನ್ನೂ ನಾವು ಒಳಗೆ ಬಿಟ್ಟುಕೊಳ್ಳುತ್ತೇವೆ. ಬೇರೆಯವರಿಗೆ ಅವರ ಭಾಷೆಯ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತಲೂ ಹೆಚ್ಚಿನ ಪ್ರೀತಿ ನಮಗೆ ನಮ್ಮ ಭಾಷೆ ಮೇಲೆ ಇರುತ್ತೆ. ಹಾಗಾಗಿ ನಮ್ಮ ಭಾಷೆಯ ಸಿನಿಮಾವನ್ನು ನಾವು ಯಾವತ್ತೂ ಬಿಟ್ಟುಕೊಡಬಾರದು. ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ಹೆಸರಿಗಷ್ಟೆ ಡಬ್ಬಿಂಗ್ ಎಂದು ಹೇಳಿಕೊಂಡು ಪರಭಾಷೆಯ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿಲ್ಲ. ಚಿತ್ರಮಂದಿರಗಳಿಗಾಗಿ ಕನ್ನಡ ಸಿನಿಮಾಗಳು ಭೂತಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಮ್ಮದು ಅಚ್ಚ ಕನ್ನಡ ಸಿನಿಮಾ. ನಿಜವಾದ ಕನ್ನಡ ಸಿನಿಮಾಗಳನ್ನು ನೋಡಿ ಬೆಂಬಲಿಸಿ’ ಎಂದು ರಚಿತಾ ರಾಮ್ ಮನವಿ ಮಾಡುವ ಮೂಲಕ ಡಬ್ಬಿಂಗ್ ಸಿನಿಮಾಗಳ ವಿರುದ್ಧ ಅಸಮಾಧಾ ಹೊರಹಾಕುವ ಜೊತೆಗೆ ಪುಷ್ಪಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ..