ನವದೆಹಲಿ : ಸದ್ಯ ವಾಸವಿರುವ ಸರ್ಕಾರಿ ಬಂಗಲೆಯನ್ನು ಶೀಘ್ರದಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗ್ರಾಂಧಿ ವಾದ್ರಾ ಅವರು ಖಾಲಿ ಮಾಡಲಿದ್ದಾರೆ. ಇದರ ಮಧ್ಯೆ ರಾಜ್ಯಸಭೆಯ ಭಾರತೀಯ ಜನತಾ ಪಕ್ಷದ ಸದಸ್ಯ ಅನಿಲ್ ಬಲೂನಿ ಅವರನ್ನು ಪ್ರಿಯಾಂಕಾ ಗಾಂಧಿ ಚಹಾ ಕೂಟಕ್ಕಾಗಿ ಆಹ್ವಾನಿಸಿದ್ದಾರೆ. ಅನಿಲ್ ಬಲೂನಿ ಅವರನ್ನು ಪತ್ರ ಮತ್ತು ದೂರವಾಣಿ ಮೂಲಕ ಆಹ್ವಾನಿಸಲಾಗಿದೆ.
ಇನ್ನು ಪ್ರಿಯಾಂಕಾ ವಾದ್ರಾ ನಿಗದಿತ ಸಮಯದೊಳಗೆ ಮನೆ ಖಾಲಿ ಮಾಡಲು ಸಿದ್ಧರಾಗಿದ್ದಾರೆ. ಬಂಗಲೆಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ಎಸ್ಟೇಟ್ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಿಯಾಂಕಾ ಗಾಂಧಿಯ ಆಪ್ತ ಸಹಾಯಕ ಹೇಳಿದ್ದಾರೆ.








