ಕಾಂಗ್ರೆಸ್ ಪಕ್ಷದ ಆಡಳಿತವಿರುವ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಿಂದ ಪ್ರತಿನಿತ್ಯ ಭರ್ತಿಯಾಗಲಿದೆ. ಹಳೆ ನಾಯಕರ ಬದಲಿಗೆ ಉತ್ಸಾಹಿ ಪ್ರಿಯಾಂಕಾ ವಾದ್ರಾರನ್ನು ಆಯ್ಕೆ ಮಾಡಲು ಛತ್ತೀಸ್ಗಢ ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ. ಪ್ರಿಯಾಂಕಾವಾದ್ರಾರನ್ನು ರಾಜ್ಯಸಭೆಗೆ ಕಳಿಸಿಕೊಟ್ಟು, ಲೋಕಸಭೆಯಲ್ಲಿ ಅವರ ಅಣ್ಣ ರಾಹುಲ್ ಅವರಿಗೆ ನಾಯಕತ್ವ ನೀಡಿ ಪಕ್ಷ ಮುನ್ನಡೆಸುವುದು ಹಿರಿಯರ ಜೊತೆಗೆ ಮನಸ್ತಾಪಕ್ಕೆ ಕಾರಣವಾಗಬಹುದು. ಈಗಾಗಲೇ ಇರುವ ಕುಟುಂಬ ರಾಜಕಾರಣದ ಕಳಂಕ ಕೂಡ ಇನ್ನಷ್ಟು ಹೆಚ್ಚಾಗುವ ಅಪಾಯ ಇದೆ. ಈ ಎಲ್ಲಾ ವಿಚಾರಗಳನ್ನು ತಿಳಿದಿರುವ ಸೋನಿಯಾ ಅವರು ಪ್ರಿಯಾಂಕಾ ವಾದ್ರಾರನ್ನು ರಾಜ್ಯಸಭೆಗೆ ಕಳಿಸಿಕೊಡಲು ಹಿಂದೇಟು ಹಾಕುತ್ತಿದ್ದಾರೆಂದು ಪಕ್ಷದಲ್ಲಿ ಗುಸು ಗುಸು ಚರ್ಚೆಯಾಗುತ್ತಿದೆ.
ಜನನಾಯಕನಿಗೆ ಅಬಕಾರಿ ಇಲಾಖೆಯ ಭಾರವೋ ಅಥವಾ ಸಚಿವ ಸ್ಥಾನದ ಗರ್ವವೋ?ಸಚಿವರಾದ ಮೇಲೆ ಕೈಗೆ ಸಿಗದ ಸಾಹುಕಾರ:ಕೈಗೆ ಸಿಗದ ಶಿವಲಿಂಗೇಗೌಡರ ವಿರುದ್ಧ ಕಾರ್ಯಕರ್ತರು ಕೆಂಡಾಮಂಡಲ!
ಅರಸೀಕೆರೆಯ ಜನಮಾನಸದಲ್ಲಿ ಬೆರೆತು, ಜನರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಕೆ ಎಂ ಶಿವಲಿಂಗೇಗೌಡರು ಇಂದು ಸಚಿವರಾದ ಮೇಲೆ ಬದಲಾದರೇ ಎಂಬ ಪ್ರಶ್ನೆ ಹಾಸನ ಜಿಲ್ಲೆಯ ರಾಜಕೀಯ...








