pro kabaddi 2022 ಯು ಮುಂಬಾ ವಿರುದ್ಧ ಭರ್ಜರಿ ಗೆಲುವು ಕಂಡ ದಬಾಂಗ್ ಡೆಲ್ಲಿ
ಅಕ್ಟೋಬರ್ 7 ರಿಂದ ಆರಂಭವಾಗಿರುವ Vivo Pro kabaddi ಲೀಗ್ ನಲ್ಲಿ ಮೊದಲನೇ ದಿನ ಕಂಠೀರವ ಸ್ಟೇಡಿಯಮ್ ನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ..
ಈ ಮೂಲಕ ದೆಹಲಿ ತಂಡ ಪ್ರೋ ಕಬಡ್ಡಿ 9 ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.. 41-27 ಅಂತರದಲ್ಲಿ ಡೆಲ್ಲಿ ಯೂ ಮುಂಬಾ ವಿರುದ್ಧ ಗೆದ್ದು ಬೀಗಿದೆ…
ಆರಂಭದಲ್ಲಿ ಡೆಲ್ಲಿ ತಂಡದ ನಾಯಕ ನಾಯಕ ನವೀನ್ ಚುರುಕಿನ ದಾಳಿ ನಡೆಸಿದರು. ಡೆಲ್ಲಿ ಪರ ಒಟ್ಟಾರೆಯಾಗಿ 13 ಅಂಕಗಳನ್ನು ಗಳಿಸಿದರು. ನವೀನ್ ಲೀಗ್ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್ ಟೆನ್ ಅಂಕಗಳನ್ನು ಗಳಿಸಿ ಹೊಸ ದಾಖಲೆಯನ್ನೂ ಬರೆದರು.. 11 ಟಚ್ ಪಾಯಿಂಟ್, 2 ಬೋನಸ್ ಪಾಯಿಂಟ್ ಸೇರಿ ತಂಡಕ್ಕೆ 13 ಅಂಕಗಳನ್ನ ತಂದು ಕೊಟ್ಟು ಗೆಲುವಿನಲ್ಲಿ ಮಹತ್ತರ ಪಾತ್ರ ವಹಸಿದರು.. ಉಳಿದಂತೆ ಅಶು ಮಲಿಕ್ ಸಹ ಉತ್ತಮವಾಗಿ ಆಟವನ್ನಾಡಿದ್ದಾರೆ.. ತಂಡಕ್ಕೆ 7 ಅಂಕಗಳನ್ನ ಗಳಿಸಿದರು. ಅಲ್ಲದೇ ಡೆಲ್ಲಿಯ ಡಿಫೆಂಡಿಂಗ್ ಕೂಡ ಬಲಿಷ್ಠವಾಗಿದೆ.. ಡಿಫೆಂಡರ್ ಗಳಾದ ಸಂದೀಪ್ ಧುಲ್, ಕೃಶನ್, ವಿಶಾಲ್ ತಲಾ 4 ಅಂಕ ಗಳಿಸಿದ್ದು ,ಯೂ ಮುಂಬಾವನ್ನ ಸೋಲಿಸಿದ್ದಾರೆ..
ಇತ್ತ ಬೆಂಗಳೂರು ಬುಲ್ಸ್ ತಂಡವೂ ಸಹ ಉದ್ಘಾಟನಾ ಪಂದ್ಯದಲ್ಲಿ ( ಅಕ್ಟೋಬರ್ 7 ) ತೆಲುಗು ಟೈಟನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.. 34-29 ಅಂಕಗಳ ಅಂತರದಲ್ಲಿ ಗೆದ್ದು ಬೀಗಿದೆ..
ಇಂದು ಇಂದು ನಡೆಯುವ ಪಂದ್ಯಗಳ ವಿವರ..
ಇಂದು ಒಟ್ಟಾರೆ 3 ಪಂದ್ಯಗಳು ನಡೆಯಲಿದೆ..
ಪಟ್ನಾ ಪೈರೆಟ್ಸ್ – ಪುಣೇರಿ ಪಲ್ಟನ್
ಗುಜರಾತ್ ಜೈಂಟ್ಸ್ – ತಮಿಳ್ ತಲೈವಾಸ್
ಬೆಂಗಾಲ್ ವಾರಿಯರ್ಸ್ – ಹರಿಯಾಣ ಸ್ಟೀಲರ್ಸ್
ರಾತ್ರಿ 7.30 ಗೆ ಮೊದಲ ಪಂದ್ಯ ಆರಂಭವಾಗಲಿದೆ..
pro kabaddi 2022: Dabang Delhi beat U Mumba in Pro Kabaddi League season opener