Pro Kabaddi : ಇಂದು ಪ್ಲೇ ಆಫ್ ನಲ್ಲಿ ಗೂಳಿಗಳಿಗೆ ಡೆಲ್ಲಿ ಎದುರಾಳಿ..!!
ಪ್ರೊ ಕಬಡ್ಡಿಯ 9ನೇ ಆವೃತ್ತಿಯ ಪ್ಲೇ ಆಫ್ಗೆ ಆಖಾಡ ಸಜ್ಜಾಗಿದೆ. ಮಂಗಳವಾರ ನಡೆಯುವ ಮೊದಲ ಎಲಿಮಿನೇಟರ್ನಲ್ಲಿ ಬೆಂಗಳೂರು ಬುಲ್ಸ್ ತಂಡ ಇಂದು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನುಎದುರಿಸಲಿದೆ.
2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ಈ ಬಾರಿಯ ಟೂರ್ನಿಯಲ್ಲಿ 22 ಪಂದ್ಯಗಳಲ್ಲಿ 13 ಗೆಲುವು ದಾಖಲಿಸಿದ್ದು 74 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆದಿತ್ತು. ಇನ್ನು ಹಾಲಿ ಚಾಂಪಿಯನ್ ಡೆಲ್ಲಿ ದಬಾಂಗ್ ತಂಡ 10 ಗೆಲುವಿನೊಂದಿಗೆ 63 ಅಂಕ ಸಂಪಾದಿಸಿ 6ನೇ ಸ್ಥಾನ ಪಡೆದು ಪ್ಲೇಆಫ್ಗೆ ಎಂಟ್ರಿಕೊಟ್ಟಿತ್ತು.
ಈ ಬಾರಿಯ ಲೀಗ್ನಲ್ಲಿ ಡೆಲ್ಲಿ ದಬ್ಬಾಂಗ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದ್ದ ಬೆಂಗಳೂರು ಬುಲ್ಸ್ ಇಂದು ಕೂಡ ಡೆಲ್ಲಿ ದಬಾಂಗ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.
ಮತ್ತೊಂದು ಪಂದ್ಯದಲ್ಲಿ 2ನೇ ಎಲಿಮಿನೇಟರ್ನಲ್ಲಿ ಯುಪಿ ಯೋಧಾಸ್ ತಂಡ ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ಜೈಪುರ ಹಾಗೂ ಪುಣೇರಿ ಪಲ್ಟಾನ್ ಸೆಮಿಫೈನಲ್ ನಲ್ಲ ಸೆಣಸಲಿವೆ.
ಪಂದ್ಯ ವೇಳಾಪಟ್ಟಿ
ಬುಲ್ಸ್- ಡೆಲ್ಲಿ : ಪಂದ್ಯ 7.30 ರಾತ್ರಿ
ಯೋಧಾಸ್- ತಲೈವಾಸ್ : 8.30 ರಾತ್ರಿ
Pro Kabaddi , bengaluru bulls , dabang dehli