Pro Kabaddi : ಎಲಿಮಿನೇಟರ್ ನಲ್ಲಿ ಹಾಲಿ ಚಾಂಪಿಯನ್ ವಿರುದ್ಧ ತೊಡೆ ತಟ್ಟಲಿರುವ ‘ಗೂಳಿಗಳು’
ನಮ್ಮ ಬೆಂಗಳೂರಿನ ಗೂಳಿಗಳು ಪ್ರೋ ಕಬಡ್ಡಿ ಸೀಸನ್ 9 ರಲ್ಲಿ ಈಗಾಗಲೇ ಪ್ಲೇ ಆಫ್ ತಲುಪಿದ್ದಾರೆ.. ಎಲಿಮಿನೇಟರ್ ನಲ್ಲಿ ದಬಾಂಗ್ ದೆಹಲಿ ವಿರುದ್ಧ ಬುಲ್ಸ್ ಸೆಣಸಾಡಲಿದ್ದು , ಈ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರಲಿದೆ..
ಅಂದ್ಹಾಗೆ ಪಾಯಿಂಟ್ ಟೇಬಲ್ ನಲ್ಲಿ ಬೆಂಗಳೂರು ಆರಂಭದಿಂದಲೂ ಅಗ್ರ ಮೂರರ ಸ್ಥಾನದಲ್ಲೇ ಕಾಣಿಸಿಕೊಂಡಿದೆ.. ಸದ್ಯ ಪ್ಲೇ ಆಫ್ ತಲುಪಿರುವ ದೆಹಲಿ ಜೊತೆಗೆ ಬುಲ್ಸ್ ಸೆಣಸಾಟ ಸಖತ್ ರೋಚಕವಾಗಿರಲಿದೆ..
ಹಾಗೆ ನೋಡಿದ್ರೆ ಈ ಸೀಸನ್ ನಲ್ಲಿ ಬೆಂಗಳೂರು ಬುಲ್ಸ್ ದೆಹಲಿಗಿಂತಲೂ ಉತ್ತಮವಾಗಿ ಆಡಿದ್ದು , ಹೆಚ್ಚು ಪಾಯಿಂಟ್ಸ್ ಕೂಡ ಹೊಂದಿದೆ.. ಗೆಲುವು ಕೂಡ ದೆಹಲಿಗಿಂತ ಬುಲ್ಸ್ ಗೆ ಹೆಚ್ಚು ಸಿಕ್ಕಿದೆ.. ಆಡಿರುವ 22 ಪಂದ್ಯಗಳಲ್ಲಿ
ದಬಾಂಗ್ ದೆಹಲಿ ಆಡಿರುವ 22 ಪಂದ್ಯಗಳಲ್ಲಿ 10 ಗೆದ್ದುಕೊಂಡಿದೆ.. 10 ಸೋತಿದೆ.. 2 ಡ್ರಾ ಮಾಡಿಕೊಂಡಿದ್ದು , 66 ಪಾಯಿಂಟ್ಸ್ ಗಳನ್ನ ಗಳಿಸಿದೆ..
ಬೆಂಗಳೂರು ಬುಲ್ಸ್ ಆಡಿರುವ 21 ಪಂದ್ಯಗಳಲ್ಲಿ 13 ಅನ್ನ ಗೆದ್ದುಕೊಂಡಿದೆ.. 7 ರಲ್ಲಿ ಸೋಲು 1 ಟೈ ಮಾಡಿಕೊಂಡಿದೆ 73 ಪಾಯಿಂಟ್ಸ್ ಗಳಿಂದ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ..
ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ ಎಲಿಮಿನೇಟರ್ ನಲ್ಲಿ ಗೂಳಿಗಳು ತೊಡೆತಟ್ಟಲಿದ್ದಾರೆ..
ಎರಡನೆ ಎಲಿಮಿನೇಟರ್ನಲ್ಲಿ ತಮಿಳ್ ತಲೈವಾಸ್ ಹಾಗೂ ಯುಪಿ ಯೋಧಾಸ್ ತಂಡಗಳು ಸೆಣಸಲಿವೆ.
ಗುರುವಾರ ಬೆಂಗಾಲ್ ವಾರಿಯರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 46-46 ಅಂಕಗಳಿಂದ ಡೆಲ್ಲಿ ದಬಾಂಗ್ ಟೈ ಮಾಡಿಕೊಂಡಿತು.ಇದರೊಂದಿಗೆ ಪ್ಲೇ ಆಫ್ಗೆ 6ನೇ ತಂಡವಾಗಿ ಪ್ರವೇಶಿಸಿತು.
ಡೆಲ್ಲಿ ತಂಡ ಟೂರ್ನಿಯಲ್ಲಿ 22 ಪಂದ್ಯಗಳಿಂದ 63 ಅಂಕಗಳನ್ನು ಸಂಪಾದಿಸಿತು.
ಡೆಲ್ಲಿ ಪರ ನಾಯಕ ಮತ್ತು ರೈಡರ್ ನವೀನ್ ಕುಮಾರ್ 16 ಅಂಕ ತಂದುಕೊಟ್ಟರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್ 18 ಅಂಕ ಪಡದರು.
ಪ್ಲೇಆಫ್ ರೇಸ್ನ ಕನಸಲ್ಲಿದ್ದ ಗುಜರಾತ್, ಹರ್ಯಾಣ, ಬೆಂಗಾಲ್ ತಂಡಗಳು ನಿರಾಸೆ ಅನುಭವಿಸಿದವು.ಜೈಪುರ ಹಾಗೂ ಪುಣೇರಿ ತಂಡಗಳು ಸೆಮಿಫೈನಲ್ ತಲುಪಿವೆ.
Pro Kabaddi , bulls to face dehli in eliminator