Pro Kabaddi : ಪ್ಯಾಂಥರ್ಸ್ ಎದುರಿಗೆ ಹೀನಾಯವಾಗಿ ಸೋತ ಬೆಂಗಳೂರು ಗೂಳಿಗಳು..!!
ಅರ್ಜುನ್ ದೇಶ್ವಾಲ್ ರೈಡಿಂಗ್ಗೆ ನಲುಗಿದ ಬೆಂಗಳೂರು ಬುಲ್ಸ್ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 45-25 ಅಂಕಗಳಿಂದ ಸೋಲು ಕಂಡಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಜೈಪುರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದ ಆರಂಭದಲ್ಲೆ ಬುಲ್ಸ್ ಎಡವಿತು. ಮೊದಲಾರ್ಧದಲ್ಲಿ 10-25 ಅಂಕಗಳಿಂದ ಹಿನ್ನಡೆ ಅನುಭವಿಸಿತು. ನಾಲ್ಕು ಬಾರಿ ಆಲೌಟ್ ಆಯಿತು.
ಎರಡನೆ ಅವಧಿಯಲ್ಲಿ 15 ಅಂಕಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು. ಜೈಪುರ ಪರ ಅರ್ಜುನ್ ದೇಶ್ವಾಲ್ 13, ಡಿಫೆಂಡರ್ ಲಕ್ಕಿ ಶರ್ಮಾ 6 ಅಂಕತಂದುಕೊಟ್ಟರು. ಬುಲ್ಸ್ ಪರ ರೈಡರ್ಗಳಾದ ಭರತ್ 10 ಅಂಕ,ವಿಖಾಶ್ ಕಾಂಡೋಲಾ 3 ಅಂಕ ಪಡೆದರು.
ಮತ್ತೊಂದು ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಹಾಗೂ ತಮಿಳ್ ತಲೈವಾಸ್ ಸಮಬಲದ ಹೋರಾಟ ನೀಡಿ 37-37 ಅಂಕಗಳಿಂದ ಟೈ ಮಾಡಿಕೊಂಡವು.