Pro Kabaddi : ಪ್ಲೇ ಆಫ್ ಪ್ರವೇಶಿಸಿದ ಪುಣೇರಿ – ಜೈಪುರ್
ಪ್ರೊ ಕಬಡ್ಡಿ ಲೀಗ್ನಲ್ಲಿ ಬಲಿಷ್ಠ ಪುಣೇರಿ ಪಲ್ಟಾನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ಲೇ ಆಫ್ ತಲುಪಿವೆ. ಶುಕ್ರವಾರ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆಲುವು ದಾಖಲಿಸಿದ ಬಳಿಕ ಪ್ಲೇ ಆಫ್ ಹಾದಿ ಖಚಿತಗೊಂಡಿದೆ.
ಇನ್ನು 4 ಸ್ಥಾನಗಳಿದ್ದು ಬೆಂಗಳೂರು ಬುಲ್ಸ್ ಸೇರಿದಂತೆ ಒಟ್ಟು 7 ತಂಡಗಳು ಪೈಪೋಟಿ ನಡೆಸಲಿವೆ.
ಆಕಾಶ್ ಶಿಂಧೆ ಅವರ ಅವರ ಸೊಗಸಾದ ರೈಡಿಂಗ್ ನೆರವಿನಿಂದ ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 47-44 ಅಂಕಗಳಿಂದ ರೋಚಕ ಗೆಲುವು ದಾಖಲಿಸಿದೆ. ಪುಣೇರಿ ತಂಡ ಪ್ಲೇ ಆಫ್ಗೆ ಲಗ್ಗೆ ಹಾಕಿದೆ
ಇಲ್ಲಿನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ತಂಡ ಮೊದಲಾರ್ಧದಲ್ಲಿ 22-21 ಅಂಕಗಳ ಮುನ್ನಡೆ ಪಡೆಯಿತು.
ಪುಣೇರಿ ಪರ ರೈಡಿಂಗ್ನಲ್ಲಿ ಆಕಾಶ್ ಶಿಂಧೆ 16, ಪಂಕಜ್ ಮೋಹಿತೆ 11 ಅಂಕಗಳನ್ನು ಪಡೆದರು.
ಡೆಲ್ಲಿ ಪರ ರೈಡರ್ಗಳಾದ ನವೀನ್ ಕುಮಾರ್ 16, ಅಶು ಮಲ್ಲಿಕ್ 9 ಅಂಕ ತಂದುಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ತೆಲಗು ಟೈಟಾನ್ಸ್ ತಂಡವನ್ನು 52- 24 ಅಂಕಗಳಿಂದ ಮಣಿಸಿತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ಸತತ ನಾಲ್ಕನೆ ಪಂದ್ಯವನ್ನು ಸೋತು ಟೂರ್ನಿಯಲ್ಲಿ 18 ಪಂದ್ಯಗಳನ್ನು ಕೈಚೆಲ್ಲಿದೆ. ತಲೈವಾಸ್ ಪರ ಅಜಿಂಕ್ಯ ಪವಾರ್ ರೈಡಿಂಗ್ನಲ್ಲಿ 20 ಅಂಕ, ನರೇಂದರ್ 10 ಅಂಕ ಪಡೆದರು. ತಲೈವಾಸ್ ಪರ ರೈಡರ್ ಹನುಮಂತು 11 ಅಂಕ ಸಂಪಾದಿಸಿದರು.