ಜೂ. 26ರಂದು ರಾಜ ಭವನಗಳಿಗೆ ರೈತರ ಮುತ್ತಿಗೆ Protest
ಸೊನಪತ್ : ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದಾದ್ಯಂತ ರಾಜಭವನಗಳಿಗೆ ಮುತ್ತಿಗೆ ಹಾಕಲು ರೈತರು ಮುಂದಾಗಿದ್ದಾರೆ.
ಇದೇ ಜೂನ್ 16 ರಂದು ರಾಜಭವನಗಳಿಗೆ ಮುತ್ತಿಗೆ ಹಾಕಿ ಸಂಯುಕ್ತ ಕಿಸಾನ್ ಮೋರ್ಚ ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸವನ್ನು ಆಚರಿಸಲಿದೆ.
ಈ ಬಗ್ಗೆ ಹರ್ಯಾಣದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. ಭಾರತದ ಇತಿಹಾಸದಲ್ಲಿ 1975ರ ಜೂನ್ 26 ಕರಾಳ ದಿನವಾಗಿದೆ.
ಆ ದಿನ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಈಗಿನ ಮೋದಿ ಸರ್ಕಾರದ ಪರಿಸ್ಥಿತಿ ಕೂಡ ಅದಕ್ಕಿಂತ ಭಿನ್ನವಾಗಿಲ್ಲ, ಇದೊಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ನಡೆ ಖಂಡಿಸಿ ಜೂನ್ 26ಕ್ಕೆ ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸವೆಂದು ಆಚರಿಸಲಾಗುವುದು. ದೇಶಾದ್ಯಂತ ರಾಜಭವನದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.