Protest In China: ಚೀನಾದ ಕಟ್ಟುನಿಟ್ಟುನ ಲಾಕ್ ಡೌನ್ ವಿರುದ್ಧ ದಂಗೆ ಎಂದ ಪ್ರಜೆಗಳು…
ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚೀನಾದಲ್ಲಿ ಹೇರಲಾಗಿರುವ ಕೋವಿಡ್ ನೀತಿಯ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಬೀಜಿಂಗ್ ನಿಂದ ಆರಂಭವಾದ ಪ್ರತಿಭಟನೆಗಳು ಇದೀಗ ಚೀನಾದ ಪ್ರಮುಖ ಒಂಬತ್ತು ನಗರಗಳಿಗೆ ತಲುಪಿದೆ.
ಜನರನ್ನ ನಿಯಂತ್ರಿಸಿಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಬಂಧಿಸುತ್ತಿದ್ದರೂ ಜನರ ಆಕ್ರೋಶ ಮಾತ್ರ ಮುಗಿಯುತ್ತಿಲ್ಲ. ಭಾನುವಾರ ರಾತ್ರಿಯಿಡೀ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಜನರು ಲಾಕ್ಡೌನ್ ತೆಗೆದುಹಾಕುವಂತೆ ಮತ್ತು ಸ್ವಾತಂತ್ರ್ಯವನ್ನ ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ನಮಗೆ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಚಳುವಳಿಯ ಸ್ವಾತಂತ್ರ್ಯ ಬೇಕು. ನಮ್ಮ ಸ್ವಾತಂತ್ರ್ಯ ನಮಗೆ ಕೊಡಿ, ಎಂದು ಪ್ರತಿಭಟನಾಕಾರರು ಅಧ್ಯಕ್ಷ ಕ್ಸಿ ಜಿನ್ಪಿಂಗ್ ರಾಜೀನಾಮೆಗೆ ಜನರು ಒತ್ತಾಯಿಸುತ್ತಿದ್ದಾರೆ.
ಚೀನಾದಲ್ಲಿ ಕೊರೊನಾ ನಿರಂತರವಾಗಿ ಹೆಚ್ಚಾಗುತ್ತಿದ್ದು, ನವೆಂಬರ್ 27 ರಂದು 40 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ. ಇದರಿಂದಾಗಿ ಕ್ಸಿ ಜಿನ್ಪಿಂಗ್ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ.
ಕಟ್ಟುನಿಟ್ಟಾದ ಲಾಕ್ಡೌನ್ನಿಂದ 66 ಲಕ್ಷ ಜನರು ಮನೆಗಳಲ್ಲಿ ಬಂಧಿಯಾಗಿದ್ದಾರೆ. ಈ ಜನರು ಆಹಾರ ಪದಾರ್ಥಗಳಿಗಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ದೈನಂದಿನ ಕೋವಿಡ್ ಪರೀಕ್ಷೆಯಿಂದಾಗಿ ಅಸಮಾಧಾನವೂ ಹೆಚ್ಚುತ್ತಿದೆ. ಸರ್ಕಾರದ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
Protest In China: Citizens revolt against China’s strict lockdown…