ನಮ್ಮ ಭರವಸೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡಲ್ಲ – ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು : ಕಳೆದ ಬಾರಿಯ ಪ್ರತಿಭಟನೆಯ ವೇಳೆ ನಮ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸರ್ಕಾರ ಕೊಟ್ಟಿತ್ತು. ಆದ್ರೆ ಯಾವುದೇ ಬೇಡಿಕೆಗಳನ್ನು ಸಮಪರ್ಕವಾಗಿ ಈಡೇರಿಸಿಲ್ಲ.
ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ವಿ. ಅದನ್ನು ಬದಿಗೊತ್ತಿ 6ನೇ ವೇತನ ಆಯೋಗ ಜಾರಿ ಮಾಡ್ತೇವೆ ಅಂದ್ರು. ಆದ್ರೆ ಈಗ ಅದೂ ಆಗಲ್ಲ 17% ಸಂಬಳ ಹೆಚ್ಚಳ ಮಾಡ್ತೀವಿ ಅಂತ ಹೇಳ್ತಿದ್ದಾರೆ.
ಆದರೆ ನಾವು ಸಂಬಳ ಹೆಚ್ಚಳಕ್ಕೆ ಮನಸೋಲುವುದಿಲ್ಲ. ನಮಗೆ ಸರ್ಕಾರವೇ ಹೇಳಿದಂತೆ 6ನೇ ವೇತನ ಆಯೋಗವೇ ಜಾರಿಯಾಗಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.
ನಾಳೆ ಸಾರಿಗೆ ನೌಕರರ ಬಸ್ ಬಂದ್ ವಿಚಾರವಾಗಿ ಮಾತನಾಡಿದ ಅವರು ನಾಳೆಯಿಂದ ನಾವು ಮತ್ತೆ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ. ನೌಕರರು ಯಾರೂ ಕೆಲಸಕ್ಕೆ ಹೋಗುವುದಿಲ್ಲ.
ಕೊರೋನಾ ಎರಡನೇ ಅಲೆ ಇದೆ ಜನರಿಗೆ ತೊಂದರೆ ಕೊಡಲು ನಮಗೆ ಇಷ್ಡವಿಲ್ಲ. ಇಷ್ಟಕ್ಕೆಲ್ಲಾ ಸರ್ಕಾರವೇ ಕಾರಣ, ಇದರ ಹೊಣೆ ಸರ್ಕಾರವೇ ಹೊತ್ತುಕೊಳ್ಳಬೇಕು.
ಇವತ್ತು ಸಂಜೆಯೊಳಗೆ 6ನೇ ವೇತನ ಆಯೋಗ ಜಾರಿ ಮಾಡಲಿ. ನಾಳಿನ ಮುಷ್ಕರ ವಾಪಾಸು ಪಡೆಯಲು ಸಿದ್ಧರಿದ್ದೇವೆ.
ಈ ಬಾರಿ ಕೇವಲ ಆಶ್ವಾಸನೆ ಕೊಟ್ಟರೆ ಸಾಲದು, ಅಧಿಕೃತವಾಗಿ ಘೋಷಣೆ ಮಾಡಬೇಕು. ಇಲ್ಲವಾದರೆ ಅನಿರ್ಧಿಷ್ಟಾವಧಿ ಬಂದ್ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
