PUC, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ; ಪುನರುಚ್ಚರಿಸಿದ ಸಿ ಎಂ ಬೊಮ್ಮಾಯಿ…
ರಾಜ್ಯದಲ್ಲಿ ಈ ಸಾಲಿನಿಂದ ಪಿಯುಸಿಯಿಂದ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ, ದುಡಿಯುವ 30 ಲಕ್ಷ ಮಹಿಳೆಯರಿಗೆ ಹಾಗೂ 4 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ, ಇದು ನಮ್ಮ ಸರ್ಕಾರದ ಗ್ಯಾರಂಟಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
ನಿನ್ನೆ ಬಾಗಲಕೊಟೆಯಲ್ಲಿ ಹಲವು ಯೋಜನೆಗಳನ್ನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರ ಯೋಜನೆಗಳನ್ನ ಜನರ ಮುಂದೆ ತೆರದಿಟ್ಟರು, ಇಲ್ಲಿಯವರೆಗೆ ಒಂದರಿಂದ ಹತ್ತರವರೆಗೆ ಉಚಿತ ಶಿಕ್ಷಣವನ್ನ ನೀಡಲಾಗುತಿತ್ತು ಇದೀಗ ಪದವಿಯವರೆಗೂ ಉಚಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ದುಡಿಯುವ ಹಾಗೂ ಶ್ರಮಿಕ ವರ್ಗಳಿಗೆ ಅವಕಾಶ ಕಲ್ಪಿಸಿ, ಅವರಿಗೆ ಖರೀದಿಸುವ ಶಕ್ತಿ ತುಂಬುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವುದು ನಮ್ಮ ಸಂಕಲ್ಪವಾಗಿದೆ. ಕಳೆದ ವಾರ 10,000 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ ಹಣ ಬಿಡುಗಡೆ ಮಾಡಲಾಯಿತು ಮತ್ತು 23ರಂದು ಪುನಃ 10,000 ಸ್ತ್ರೀ ಶಕ್ತಿ ಸಂಘಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಮತ್ತು ಆ ಮೂಲಕ ರಾಜ್ಯದ ಮಹಿಳೆಯರು ಸ್ವಾವಲಂಬನೆಯ, ಸ್ವಾಭಿಮಾನಿ ಬದುಕು ನಡೆಸಲು ನೆರವು ನೀಡಲಾಗುವುದು. ಯಾವುದೇ ರಾಜ್ಯದಲ್ಲೂ ಈ ಪ್ರಮಾಣದ ನೆರವನ್ನು ಮಹಿಳಾ ಸಂಘಟನೆಗಳಿಗೆ ನೀಡಿದ ಉದಾಹರಣೆಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
PUC, free education for graduate students; CM Bommai reiterated…