Pune Bangalore Highway Accident-ಪುಣೆಯಲ್ಲಿರುವ ನವಲೆ ಸೇತುವೆ ಕಳೆದ ಕೆಲವು ದಿನಗಳಿಂದ ಅಪಘಾತಗಳ ಹಾಟ್ ಸ್ಪಾಟ್ ಆಗಿದ್ದು. ಅಪಘಾತದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಭಾನುವಾರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಗಾತದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದು ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆ ಮೇಲೆ 48 ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಕೊಂಡಿವೆ .
ಈ ಸಮಯದಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ರಕ್ಷಿಸಿವೆ. ಪುಣೆ ಅಗ್ನಿಶಾಮಕ ದಳದ ಮತ್ತು ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ತಂಡಗಳು ಸ್ಥಳಕ್ಕೆ ಆಗಮಿಸಿ, ಜನರನ್ನು ರಕ್ಷಿಸುವ ಕಾರ್ಯ ನಡೆಸಿದ್ದಾರೆ.
40-50 ಜನರು ಈ ಅಪಘಾತದಲ್ಲ ಗಾಯಗೊಂಡಿದ್ದು ಗಾಯಾಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೇನರ್‌ನ ಬ್ರೇಕ್ ಫೇಲ್ ಆದಕಾರಣ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದೆ.
ಮುಂಬೈನಿಂದ ಸತಾರಾ ಕಡೆಗೆ ಹೋಗುತ್ತಿದ್ದ ಕಂಟೇನರ್‌ಗೆ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ ಈ ಸಂಧರ್ಬದಲ್ಲಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಕಂಟೇನರ್ ಮುಂದೆ ಮತ್ತು ಹಿಂದೆ ಚಲಿಸುತ್ತಿದ್ದ 45ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿ ಝಖಂ ಗೊಂಡಿವೆ. ಅಪಗಾತವು ರಾತ್ರಿ 8.30- 9.00 ರ ಸುಮಾರಿಗೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಪಘಾತದ ನಂತರ ಕಾರಿನಿಂದ ಹೊರಬಿದ್ದ ಆಯಿಲ್ ಕೂಡ ಹಿಂದೆ ಬರುವ ವಾಹನಗಳ ಅಪಘಾತಕ್ಕೆ ಕಾರಣವಾಗಿದೆ. ಇದರಿಂದ ಹಲವು ವಾಹನಗಳು ಸ್ಕಿಡ್ ಆಗಿ ಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆದಿವೆ.
A major accident occurred at Navale bridge on the Pune-Bengaluru highway in Pune in which about 48 vehicles got damaged. Rescue teams from the Pune Fire Brigade and Pune Metropolitan Region Development Authority (PMRDA) have reached the spot: Pune Fire Brigade pic.twitter.com/h5Y5XtxVhW
— ANI (@ANI) November 20, 2022
ಅಪಘಾತದ ನಂತರ, ಪುಣೆಯ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಳೆ ಈ ಬಗ್ಗೆ ಟ್ವೀಟ್ ಮಾಡಿದ ಅವರು, “ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆಯಲ್ಲಿ ನಡೆದ ಅಪಘಾತ ದುರದೃಷ್ಟಕರ. ಅಗ್ನಿಶಾಮಕ ದಳ ಮತ್ತು ಪಿಎಂಆರ್‌ಡಿಎ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು ಗಾಯಾಳುಗಳನ್ನು ರಕ್ಷಿಸುತ್ತಿವೆ. ಅಪಘಾತದ ಬಗೆಗಿನ ಅನಧಿಕೃತ ಮಾಹಿತಿ ಹಂಚಿಕೊಳ್ಳಬೇಡಿ. ಅಲ್ಲದೇ ವೃತ್ತಿಪರರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ, ಹೀಗಾಗಿ ಅಪಘಾತದ ಸ್ಥಳದತ್ತ ಹೋಗುವುದನ್ನು ತಪ್ಪಿಸಿ ಎಂದು ನಾಗರಿಕರಲ್ಲಿ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.