ತಂದೆಯಂತೆ ಪುನೀತ್ ನೇತ್ರದಾನ : ಸಾವಿನಲ್ಲೂ ಸಾರ್ಥಕತೆ Puneet Raj Kumar saaksha tv
ಆಕಾಶದಷ್ಟು ಪ್ರೀತಿ ಪಡೆದಿದ್ದ.. ನಟ ಸಾರ್ವಭೌಮನಾಗಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದ.. ಕನ್ನಡದ ರಾಜ ರತ್ನ ಪುನೀತ್ ರಾಜ್ ಕುಮಾರ್ ಇಂದು ವಿಧಿವಶರಾಗಿದ್ದಾರೆ.
ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ರಾಜ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಪ್ರೀತಿಯ ಅಪ್ಪು ಸಾವಿಗೆ ಕನ್ನಡ ಚಿತ್ರರಂಗ ಮೂಖವಾಗಿದೆ. ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ.
ಇನ್ನು ನಟ ಪುನೀತ್ ರಾಜ್ ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಂದೆ ರಾಜಕುಮಾರ್ ಅವರಂತೆ ನೇತ್ರದಾನ ಮಾಡಿದ್ದಾರೆ. ಆ ಮೂಲಕ ನಟ ಪುನೀತ್ ರಾಜ್ ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.