ಶಿವಮೊಗ್ಗದಲ್ಲಿ ರಸ್ತೆಯೊಂದಕ್ಕೆ ಪುನೀತ್ ರಾಜಕುಮಾರ್ ಹೆಸರು

1 min read
puneeth saaksha tv

ಶಿವಮೊಗ್ಗದಲ್ಲಿ ರಸ್ತೆಯೊಂದಕ್ಕೆ ಪುನೀತ್ ರಾಜಕುಮಾರ್ ಹೆಸರು

ಶಿವಮೊಗ್ಗ : ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

46ರ ಹರೆಯದಲ್ಲೇ ಈ ಲೋಕದ ಯಾತ್ರೆಯನ್ನು ಮುಗಿಸಿದ್ದ ಅಪ್ಪು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ.

ಒಬ್ಬ ಕಲಾವಿದನಾಗಿ ಸಾಕಷ್ಟು ಹೆಸರು, ಸಾಧನೆ ಮಾಡಿರುವ ಅಪ್ಪು, ಮಾನವೀಯತೆಯ ಗುಣಗಳ ಮೂಲಕವೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಡಾ. ರಾಜ್ ಕುಮಾರ್ ನಡೆದ ಹಾದಿಯಲ್ಲಿ ಮುನ್ನಡೆದಿದ್ದ ಅಪ್ಪು ತಂದೆಗೆ ತಕ್ಕ ಮಗನಾಗಿ ಕರುನಾಡಿನ ಯುವ ರತ್ನನಾಗಿ ರಾರಾಜಿಸಿ ಮರೆಯಾಗಿದ್ದಾರೆ.

ಪುನೀತ್ ಅವರು ಮರಣ ಹೊಂದಿದ ನಂತರ ಹಲವು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

puneeth saaksha tv

ಆದರೆ ಶಿವಮೊಗ್ಗ ನಗರದ ಜನತೆ ಒಂದು ಹೆಜ್ಜೆ ಮುಂದೆ ಹೋಗಿ ನಗರದ ಹೃದಯ ಭಾಗದಲ್ಲಿರುವ ಲಕ್ಷ್ಮಿ ಚಿತ್ರಮಂದಿರದ ಬಳಿಯ ನಿವಾಸಿಗಳು, ರಸ್ತೆಯೊಂದಕ್ಕೆ ಪುನೀತ್ ರಾಜಕುಮಾರ್ ಎಂದು ಹೆಸರಿಟ್ಟಿದ್ದಾರೆ.

ಸುಮಾರು 1 ಕಿ.ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಅಲ್ಲದೇ ಇದೇ ಹೆಸರನ್ನ ರಸ್ತೆಗೆ ಅಧಿಕೃತಗೊಳಿಸುವಂತೆ ಮಹನಾಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.

ಇನ್ನು ರಸ್ತೆಗೆ ಸಾರ್ವಜನಿಕರೇ ಖುದ್ದು ಸೇರಿ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮ ಫಲಕವನ್ನು ಸ್ಥಾಪಿಸಿ ಉದ್ಘಾಟನೆ ನೆರವೇರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ಯವಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd