ಅಪ್ಪು ಸಾವಿನ ಸುದ್ದಿ ನೋಡ್ತಿದ್ದಂತೆ ಹೃದಾಯಾಘಾತದಿಂದ ಮೃತಪಟ್ಟ ಅಭಿಮಾನಿ
ಚಾಮರಾಜನಗರ : ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳ್ತಿದ್ದಂತೆ ಆಘಾತಕ್ಕೆ ಒಳಗಾದ ಅವರ ಅಭಿಮಾನಿಯೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಟಿವಿಯಲ್ಲಿ ಪುನೀತ್ ಸಾವಿನ ಸುದ್ದಿ ಕೇಳ್ತಿದ್ದಂತೆ ಅಬಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ 28 ವರ್ಷದ ಯುವಕ ಮುನಿಯಪ್ಪ ಮೃತ ಅಭಿಮಾನಿಯಾಗಿದ್ದಾರೆ. ಜಮೀನಿನಿಂದ ಊಟಕ್ಕೆ ಬಂದಿದ್ದ ಈತ ಟಿವಿ ಹಾಕಿದ ವೇಳೆ ಪುನೀತ್ ಸಾವಿನ ಸುದ್ದಿ ಪ್ರಸಾರವಾಗಿದೆ. ಆಘಾತಕ್ಕೆ ಒಳಗಾಗಿರುವ ಮುನಿಯಪ್ಪ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.