‘ಟಾಲಿವುಡ್’ ನಲ್ಲಿ ಅಬ್ಬರಿಸಲಿದ್ದಾರೆ ‘ಸ್ಯಾಂಡಲ್ ವುಡ್ ‘ಪವರ್ ಸ್ಟಾರ್’..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರು ಟಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2020 ರಲ್ಲಿ ಅಂತ್ಯಗೊಂಡ ಬಾಲಿವುಡ್ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
ಹೌದು ತೆಲುಗಿನ ಸಿನಿಮಾದಲ್ಲಿ ಖ್ಯಾತ ನಟನ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಅಪ್ಪು. ಹೌದು ಆದ್ರೆ ಪೂರ್ಣ ಪ್ರಮಾಣದ ನಟನಾಗಿ ಅಲ್ಲ. ಬದಲಾಗಿ ಅತಿಥಿ ಪಾತ್ರದಲ್ಲಿ ದರ್ಶನ ನಿಡಲಿದ್ದಾರೆ. ಇನ್ನೂ ಆಪ್ತರ ಒತ್ತಾಯದ ಮೇರೆಗೆ ನಟಿಸಲು ಅಪ್ಪು ಸಮ್ಮತಿಸಿರೋದಾಗಿ ತಿಳಿದುಬಂದಿದೆ. 
ಅಂದ್ಹಾಗೆ ತೆಲುಗಿನ ಸೂಪರ್ ಸ್ಟಾರ್ ನಟ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಬೊಯಪೇಟಿ ಶ್ರೀನಿವಾಸ್ ನಿರ್ದೇಶನದ ಮಾಸ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಪುನೀತ್ ರಾಜ್ಕುಮಾರ್ ನಟಿಸಲಿದ್ದಾರೆ. ಪವರ್ ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಅಭಿಮಾಣಿಗಳು ಥ್ರಿಲ್ ಆಗಿದ್ದಾರೆ.
ಅಂದ್ಹಾಗೆ ಅಪ್ಪ ಸದ್ಯ ಇತ್ತೀಚೆಗಷ್ಟೇ ಯುವರತ್ನ ಸಿನಿಮಾದ ಶೂಟಿಂಗ್ ಮುಗಿಸಿ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾದ 2 ಹಾಡುಗಳು ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








